
ಕೋಟ: ಕಲಾಭೂಮಿ ಪ್ರತಿಷ್ಠಾನ ಬೆಂಗಳೂರು ಇವರು ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು, ಮಾ.27 ರಂದು ಬೆoಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ಕೋಟದ ಹೆಸರಾಂತ ಸಂಗೀತ ಸoಸ್ಥೆಯಾದ ಶ್ರೀ ಅಘೋರೇಶ್ವರ ಮೆಲೋಡೀಸ್ ಸಂಸ್ಥೆ ಕೋಟ ಇದರ
ಗಾಯಕ ರವಿ ಬನ್ನಾಡಿ ಹಾಗೂ ಯುವ ಗಾಯಕಿ ಕುಮಾರಿ ರಿಷಿಕ.ಎಂ ಮೂಡ್ಲಕಟ್ಟೆ ಇವರಿಗೆ ಕಲಾಭೂಮಿ ಪ್ರತಿಷ್ಠಾನ ಬೆಂಗಳೂರು ಕಲಾಭೂಮಿ ಯುಗಾದಿ ಪುರಸ್ಕಾರ 2025
ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಕಲಾಭೂಮಿ ಪ್ರತಿಷ್ಠಾನ ಈ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಕೃಷ್ಣ ಮತ್ತಿತರರ ಗಣ್ಯರು ಇದ್ದರು.
Leave a Reply