
ಕೋಟ: ಕುಂದಾಪುರ ತಾಲೂಕಿನ ಬೇಳೂರಿನ ನಿವಾಸಿಯಾದ ಪ್ರಭಾಕರ್ ಆಚಾರ್ಯ ಇವರ 6 ತಿಂಗಳ ಪುತ್ರಿ ಆರ್ವಿ ಆಚಾರ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಮಗುವಿಗೆ ಲಿವರ್ ಮರುಜೋಡಣೆಗಾಗಿ 25 ಲಕ್ಷ ವೆಚ್ಚ ತಗಲುತ್ತಿರುವ ಹಿನ್ನಲ್ಲೆಯಲ್ಲಿ ಇಲ್ಲಿನ ವಿಶ್ವಕರ್ಮ ಯುವ ಸಮೂಹ ಗ್ರೂಪ್‌ನ ಸದಸ್ಯರು ಸುಮಾರು 63,000 ರೂಪಾಯಿ ಹಣವನ್ನು ಸಂಗ್ರಹಿಸಿ ಕುಟುoಬದವರಿಗೆ ಭಾನುವಾರ.ಹಸ್ತಾಂತರಿಸಿದರು.
ವಿಶ್ವಕರ್ಮ ಯುವ ಸಮೂಹ ಗ್ರೂಪ್ ಬ್ರಹ್ಮಾವರ ಮುಖ್ಯಸ್ಥ ಕೀರ್ತಿ ಬ್ರಹ್ಮಾವರ, ಸದಸ್ಯರಾದ ಉದಯ್ ಆಚಾರ್, ಮಂಜುನಾಥ್ ಆಚಾರ್, ಗಿರೀಶ್ ಆಚಾರ್ ಕೋಟ, ಪ್ರವೀಣ್ ಆಚಾರ್, ದಿನಕರ್ ಆಚಾರ್, ಶ್ರೀನಿವಾಸ ಆಚಾರ್ ಮತ್ತಿತರರು ಇದ್ದರು.
Leave a Reply