Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಚಿತ್ತೂರಿ ನಲ್ಲಿ ವಿಶಿಷ್ಟವಾಗಿ ರಂಝಾನ್  ಹಬ್ಬ ಆಚರಿಸಿಕೊಂಡ ಮುಸ್ಲಿಂ ಬಾಂಧವರು……

ಕುಂದಾಪುರ ತಾಲೂಕಿನ  ಆಲೂರು ಗ್ರಾಮದ ಹೊಯ್ಯಾಣ ಎಂಬಲ್ಲಿ  ಸುಮಾರು 20 ವರ್ಷಗಳಿಂದ ಎಂಡೋ ಸಲ್ಫಾನ್ ಪೀಡಿತರಾಗಿ ಹೊರ ಜಗತ್ತನ್ನೇ ಕಾಣದೆ ಮನೆಯೊಳಗಿದ್ದ  ಉಷಾ ಮತ್ತು ಉದಯ ಎಂಬ ಅಣ್ಣ ತಂಗಿಯರ ಬದುಕಿನ ಕರಾಳ ಕಥೆಯನ್ನು ಕೇಳಿ ತಿಳಿದ ಕುಂದಾಪುರ ತಾಲೂಕು ಚಿತ್ತೂರಿನ ಮುಸ್ಲಿಂ ಬಾಂಧವರು, ಹಬ್ಬದ ಪ್ರಾರ್ಥನೆ ಮುಗಿಸಿ ನೇರವಾಗಿ ಅವರ ಮನೆಗೆ ತೆರಳಿ ರಂಜಾನ್ ಕಿಟ್ ,  ಹಣ್ಣು ಹಂಪಲು , ಪಾನಿಯ ನೀಡಿ ಅವರೊಂದಿಗೆ ರಂಝಾನ್ ಹಬ್ಬವನ್ನು ಆಚರಿಸಿಕೊಂಡರು,  ಭೇಟಿ ನೀಡಿದ ಅಬ್ದುಲ್ ಸಲಾಂ ಚಿತ್ತೂರು ತಂಡದ ಜೊತೆ ಮಾತನಾಡಿದ ಅವರ ತಾಯಿ,  ಗ್ರಾಮ ಪಂಚಾಯತ್  ಯಿಂದ ಕುಡಿಯುವ ನೀರಿಗಾಗಿ ಬಾವಿ ಒದಗಿಸಿದ್ದು,  ಮಾರ್ಚ್ ನಂತರ ಕುಡಿಯುವ ನೀರಿನ ಅಭಾವದಿಂದಾಗಿ ಎರಡು ಮಕ್ಕಳನ್ನು ಆರೈಕೆ ಮಾಡುವುದರಲ್ಲಿ ತುಂಬಾ ಕಷ್ಟ ಆಗುತ್ತದೆ , ತುಂಬಾ ದೂರ ಹೋಗಿ ನೀರು ತರಲು ಕಷ್ಟವಾಗುತ್ತಿದ್ದ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು, ಈ ಸಂದರ್ಭದಲ್ಲಿ ತಂಡದಲ್ಲಿದ್ದ   ಅಬ್ದುಲ್ ರೆಹಮಾನ್ , ಜಯರಾಮ, ಮಹಮ್ಮದ್ , ಇಕ್ಬಾಲ್, ರಿಯಾಝ್ , ಸುಲೇಮಾನ್, ಇರ್ಷಾದ್ , ಶರ್ಫಾನ್ ತಂಡ ಒಟ್ಟಾಗಿ ನೀರಿನ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.

Leave a Reply

Your email address will not be published. Required fields are marked *