Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂಬಾರ ಹಳ್ಳದಲ್ಲಿ ಸಂಭ್ರಮದಿಂದ ಜರುಗಿದ ಹಾಲೋಕಳಿ

ಸಾವಳಗಿ: ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ಶ್ರೀ ಗುರು ಚತ್ರವರ್ತಿ ಸದಾಶಿವ ಚಂದ್ರಗಿರಿ ದೇವಿ ಜಾತ್ರಾ ಮಹೋತ್ಸವ ಹಾಗೂ ಹನುಮಾನ ದೇವರ ಓಕಳಿಯ ನಿಮಿತ್ತ   ಹಾಲೋಕಳಿ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.

ಕುಂಬಾರ ಹಳ್ಳ ಗ್ರಾಮದ ಮಾಳಿ ಮತ್ತು ಮಾರಾಯ ಸಿದ್ದ ಓಣಿಯ ಯುವಕರ ಮಧ್ಯ ಜರುಗಿದ ಓಕಳಿಯು ಅತ್ಯಂತ ತುರಿಸಿನಿಂದ ಕೂಡಿತ್ತು, ಯುವಕರು ಓಕಳಿಯ ಕಂಬ ಏರುವುದು ಅತ್ಯಂತ ರೋಚಕವಾಗಿತ್ತು.

ಜಾತ್ರಾ ಮಹೋತ್ಸವ ಹಾಗೂ ಓಕಾಳಿಯ ಮುಂದಾಳತ್ವವನ್ನು ಹಿರಿಯರಾದ ನ್ಯಾಯವಾದಿ ಸದಾಶಿವ ನ್ಯಾಮಗೌಡ, ಪಿಕೆಪಿಎಸ್ ಸದಸ್ಯ ದುಂಡಪ್ಪ ಬಾಡಗಿ, ನಾಗಪ್ಪ ಸೊನ್ನದ, ಪಿ ಎಲ್ ಡಿ ಇ ಬ್ಯಾಂಕ್ ನಿರ್ದೇಶಕ ಬಸವರಾಜ್ ಮರನೂರ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಧರೆಪ್ಪ ಮಂಟೂರ, ಚಾರ್ಟೆಡ್ ಅಕೌಂಟ್ ಧರೆಪ್ಪ ಮರನೂರ, ಗ್ರಾಮ ಪಂಚಾಯತ್, ಪಿಕೆಪಿಎಸ್, ಹಾಲು ಉತ್ಪಾದಕ ಮಂಡಳಿ, ಹಾಗೂ ಸಂಕಲ್ಪ ಸಮಿತಿಯ ಸದಸ್ಯರು ವಹಿಸಿದ್ದರು.

Leave a Reply

Your email address will not be published. Required fields are marked *