
ಕೋಟ: ವಿಶ್ವ ರಂಗ ಭೂಮಿ ದಿನಾಚರಣೆಯ ಅಂಗವಾಗಿ ಕಲಾಪೀಠ ಕೋಟ ಇವರ ಆಶ್ರಯದಲ್ಲಿ ಕೆ. ನರಸಿಂಹ ತುಂಗರ ನಿರ್ದೇಶನದಲ್ಲಿ ದ್ರೌಪದಿ ಪ್ರತಾಪ ಎಂಬ ಯಕ್ಷಗಾನ ಇತ್ತೀಚೆಗೆ ಕುಂದಾಪುರದ ಗುಡ್ಡಮ್ಮಾಡಿಯಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಉದಯ ಕುಮಾರ ಹೊಸಾಳ, ಮದ್ದಳೆಯಲ್ಲಿ ಗಣೇಶ ಶೆಣೈ, ಚಂಡೆಯಲ್ಲಿ ವಾಗ್ವಿಲಾಸ ಭಟ್ಟ ಸಹಕರಿಸಿದರು. ಅರ್ಜುನನಾಗಿ ಅನಂತ ನಾವುಡ ಹಾಗೂ ದ್ರೌಪದಿಯಾಗಿ ಕುಮಾರಿ ಉನ್ನತಿ ಹಂದಟ್ಟು ಪಾತ್ರದಾರಿಯಾಗಿ ನಿರ್ವಹಿಸಿದರು.
Leave a Reply