Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬ್ರಹ್ಮಾವರ: ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಬೇಸಿಗೆ ತರಬೇತಿ ಶಿಬಿರದ ಉದ್ಘಾಟನೆ

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಆಶ್ರಯದಲ್ಲಿ ಈಜು, ಟೆನ್ನಿಸ್, ಕ್ರಿಕೆಟ್ ಹಾಗೂ ಯೋಗಗಳನ್ನೊಳಗೊಂಡ ಬೇಸಿಗೆ ತರಬೇತಿಶಿಬಿರದ ಉದ್ಘಾಟನೆ ಸಮಾರಂಭ ತಾರೀಕು 5-4-2025 ರಂದು ಅದರ  ಹೆರಂಜೆ ಕ್ಯಾಂಪಸ್ ನಲ್ಲಿ ಜರಗಿತು. ಉದ್ಘಾಟಕರಾಗಿ ಎಸ್.ಎಂ.ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊಫೆಸರ್ ಸುಶೀಲಾ ಆರ್ ರೈ ಅವರು ಆಗಮಿಸಿ ಶಿಬಿರವನ್ನ ಉದ್ಘಾಟಿಸಿ ಸ್ಪೋರ್ಟ್ಸ್ ಕ್ಲಬ್ ಬೆಳೆದು ಬಂದ ರೀತಿ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಯುವ ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಸತತವಾಗಿ ಹಮ್ಮಿಕೊಳ್ಳುವಂತ ಕಾರ್ಯಕ್ರಮವನ್ನು  ಸ್ಲಾಗಿಸಿ ಶಿಬಿರಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತಹ ಶ್ರೀಯುತ ಎಚ್.ಶಶಿಧರ್ ಶೆಟ್ಟಿ, ಮಾಲಕರು, ಶಂಕರ್ ನಾರಾಯಣ ಕ್ಯಾಶ್ಯೂ ಇಂಡಸ್ಟ್ರಿ, ಶಂಕರ್ ನಾರಾಯಣ ಹಾಗೂ  ಸಂಪತ್ ಶೆಟ್ಟಿ, ಮಾಲಕರು , ಕೃಷ್ಣ ಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್, ಬ್ರಹ್ಮಾವರ ಮತ್ತು ವಂಡಾರ್ ಇವರುಗಳು ಕಬ್ಬಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿರುವಂತಹ  ಎಂ. ಚಂದ್ರಶೇಖರ್ ಹೆಗ್ಡೆ ಮತ್ತು ಅವರ ತಂಡದವರ ದೂರ ದೃಷ್ಟಿ ಮತ್ತು ಪರಿಶ್ರಮವನ್ನು ಶ್ಲಾಗಿಸುತ್ತಾ ಸಮಾಜದ ಎಲ್ಲಾ ವರ್ಗದ ಜನರಿಗೆ ಉಪಯೋಗವಾಗುವಂತಹ ಒಂದು ಉತ್ತಮ ಸಂಸ್ಥೆ ಇನ್ನು ಎತ್ತರಕ್ಕೆ ಸಾಗಲಿ ಎಂದು ಹಾರೈಸಿದರು.

ಅದೇ ರೀತಿ ಶಿಬಿರಾರ್ಥಿಗಳು ಪಾಠದೊಂದಿಗೆ ಪಾಠ್ಯೆತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು. ಅಧ್ಯಕ್ಷತೆಯನ್ನು ವಹಿಸಿರುವಂತಹ ಕ್ಲಬ್ಬಿನ ಅಧ್ಯಕ್ಷರಾದ ಎ ಮಹೇಶ್ ಶೆಟ್ಟಿಯವರು ಕ್ಲಬ್ಬಿನಲ್ಲಿ ನೀಡುವಂತಹ ಉತ್ತಮ ತರಬೇತಿಯನ್ನು ಮಕ್ಕಳು ಪಡೆದುಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನ ಗಳಿಸಬೇಕೆಂದು ಹಾರೈಸಿದರು. ಕ್ಲಬ್ಬಿನ ಗೌರವಾಧ್ಯಕ್ಷರಾದ ಎಂ ಚಂದ್ರಶೇಖರ್ ಹೆಗ್ಡೆ ಯವರು ಆಗಮಿಸಿದ ಎಲ್ಲರನ್ನೂ ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಈಜುತರಬೇತುದಾರರಾದ ಪ್ರಶಾಂತ್ ಮೆಂಡನ್, ಟೆನ್ನಿಸ್ ತರಬೇತುದರಾದ ನಿಖಿಲ್, ಕ್ರಿಕೆಟ್ ತರಬೇತುದಾರಾದ ರಾಜೇಂದ್ರ ಹಾಗೂ ಯೋಗ ತರಬೇತುದರಾದ ಪ್ರವೀನಾ ಹೆಗ್ಡೆ ಯವರನ್ನು ಗುರುತಿಸಲಾಯಿತು. ಸಮಾರಂಭದಲ್ಲಿ ಉಪಾಧ್ಯಕ್ಷರಾದ  ಚಂದ್ರಶೇಖರ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಬಿಜು ನಾಯರ್, ಕ್ರೀಡಾ ಕಾರ್ಯದರ್ಶಿಗಳಾದ ಪ್ರಸನ್ನ ಕುಮಾರ್ ಶೆಟ್ಟಿ ಮತ್ತು ವಿಕ್ರಂ ಪ್ರಭು, ಕಾರ್ಯಕಾರಿ ಸಮಿತಿಯ ಸದಸ್ಯರಾದ ರೊಟೇರಿಯನ್ ಆರೂರು  ಶ್ರೀಧರ್ ಶೆಟ್ಟಿ ಮತ್ತು ಅಬ್ದುಲ್ ಸಲಾಂ ಸಾಹೇಬ್ , ಗೌರವ ಕಾರ್ಯದರ್ಶಿಗಳಾದ  ಗ್ರೆಗರಿ ಡಿ’ಸಿಲ್ವಾ ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಮೇಜರ್. ಜಿ. ಬಾಲಕೃಷ್ಣ ಶೆಟ್ಟಿ ಯವರು ವಂದಿಸಿ ವಿಕ್ರಂ ಪ್ರಭುಗಳು ಕಾರ್ಯಕ್ರಮವನ್ನ ನಿರ್ವಹಿಸಿದರು.

Leave a Reply

Your email address will not be published. Required fields are marked *