
ಕೋಟ: ಇಲ್ಲಿನ ಮಣೂರು ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿರುವ ಪ್ರಸಿದ್ಧ ದೇಗುಲವಾದ ಶ್ರೀ ಮಹಾಲಿಂಗೇಶ್ವರ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನ ವಾರ್ಷಿಕ ರಥೋತ್ಸವ,ಸಾಂಸ್ಕöÈತಿಕ ಸಂಭ್ರಮ ಎ. 9ರಿಂದ 14ರ ತನಕ ನಡೆಯಲಿದೆ.
ಈ ಪ್ರಯುಕ್ತ ಎ.10. ಗುರುವಾರದಿಂದ ಮೊದಲ್ಗೊಂಡು 14ನೇ ಸೋಮವಾರದವರೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ತಂತ್ರಿಗಳಾದ ಪವಿತ್ರಪಾಣಿ ಗಣೇಶ ಐತಾಳ ಪಾರಂಪಳ್ಳಿ ಇವರ ನೇತೃತ್ವದಲ್ಲಿ ಹಾಗೂ ವೇದಮೂರ್ತಿ ಶ್ರೀ ರಾಮ ಪ್ರಸಾದ ಗರಿಕೆಮಠ ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು
10. ಗುರುವಾರ ಮುಂಜಾನೆ ಪ್ರಾರ್ಥನೆ, ನಾಂದಿ ಪುಣ್ಯಾಹ, ಮುಹೂರ್ತ ಬಲಿ, ಅಂಕುರಾ ಪುಣ್ಯಾಹ, ಧ್ವಜಾಧಿವಾಸ ಹೋಮ, ಧ್ವಜಾರೋಹಣ, ವೇದಾರಂಭ ,ಬಲಿ, ವಾಸ್ತು ರಾಕ್ಷೆಘ್ನ ಹೋಮ, ರಜ್ಜು ಬಂಧನ, ಉತ್ಸವ ಬಲಿ, ಎ.11ರ ಶುಕ್ರವಾರ ಪುಣ್ಯಾಹ ವಾಚನ, ಅಗ್ನಿ ಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ ,ಸಂಜೆ ಬಲಿ, ಕಟ್ಟೆಪೂಜೆ, ಉತ್ಸವ ರಂಗಪೂಜೆ, ಉತ್ಸವ ಬಲಿ, ಕ್ಷೇತ್ರಪಾಲ ಪೂಜೆ, ಮಹಾಪೂಜೆ ಎ.12ರ ಶನಿವಾರ ಪುಣ್ಯಾಹ ವಾಚನ, ಪ್ರಧಾನಹೋಮ, ಕಲಶಾಭಿಷೇಕ, ರಥ ಶುದ್ದಿಹೋಮ, ರಥ ಪೂಜೆ, ಬಲಿ ಬೆಳಿಗ್ಗೆ ಗಂಟೆ 11.55ಕ್ಕೆ ಶುಭ ಲಗ್ನದಲ್ಲಿ ರಥಾರೋಹಣ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಅನ್ನಸಂತರ್ಪಣೆ ಸಂಜೆ ರಥಯಾತ್ರೆ, ರಥಾವರೋಹಣ, ಆಲಯ ಪ್ರವೇಶ, ಮಂಗಳಾರತಿ, ಪ್ರಸಾದ ವಿತರಣೆ, ಸಂಹಾರ ಬಲಿ, ದೇವರ ಶಯನೋತ್ಸವ ವಿಶೇಷ ಆಕರ್ಷಣೆಯಾಗಿ ಕೊಂಬು ಕಹಳೆ, ಡೊಳ್ಳು ಕುಣಿತ, ಕೀಲು ಕುದುರೆ, ಚಂಡೆವಾದನ, ಬ್ಯಾಂಡ್‌ಸೆಟ್, ಸಿಡಿಮದ್ದು ಪ್ರದರ್ಶನ, ಎ.13ರ ಆದಿತ್ಯವಾರ ಪ್ರಭೋದೋತ್ಸವ, ಅಷ್ಟಾವಧಾನ ಸೇವೆ ಹೋಮ, ಕಲಶಾಭಿಷೇಕ ಪೂಜೆಗಳು ಬೆಳಿಗ್ಗೆ 8.00ಕ್ಕೆ ಶ್ರೀ ಹೇರಂಬ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ ಎ.14ರ ಸೋಮವಾರ ಸಂಪ್ರೋಕ್ಷಣೆ ನಡೆಯಲಿದೆ.
ಸಾಂಸ್ಕೃತಿಕ ಪರ್ವ
ಎಪ್ರಿಲ್ 9ರಿಂದ ಸಂಜೆ 5.30ಕ್ಕೆ ಸಾಂಸ್ಕöÈತಿಕ ಕಾರ್ಯಕ್ರಮಗಳ ಉದ್ಘಾಟನೆಗೊಳ್ಳಲಿದ್ದು,
ಸಂಜೆ 6.00 ರಿಂದ 7.15 ಛಾಯ ತರಂಗಿಣಿ ಸಂಗೀತ ಶಾಲೆ ಹರ್ತಟ್ಟು ಇವರಿಂದ ವಾಯಲಿನ್ ವಾದನ, ನಾದ-ಸಂಗೀತ-ಲಹರಿ,ಭರತನಾಟ್ಯ, ನಗೆಹಬ್ಬ ರಾತ್ರಿ 7.15 ರಿಂದ 8.30 ಸಾಂಸ್ಕöÈತಿಕ ಸಿರಿ (ಹೆಜ್ಜೆಗೆಜ್ಜೆಗಳ ಹೂರಣ ಸ್ನೇಹ ಕೂಟ ಮಣೂರು ಇವರಿಂದ , ಎ.10ರ ಗುರುವಾರ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಇವರಿಂದ
ಸಂಜೆ 5.30 ರಿಂದ 7.00 ಬಾಲಕಲಾವಿದರಿಂದ ಕುಮಾರ ವಿಜಯ ಹಾಗೂ ರಾತ್ರಿ 7.00 ರಿಂದ 9.30 ಹಿರಿಯ ಕಲಾವಿದರಿಂದ ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ, ಎ. 11ರ ಶುಕ್ರವಾರ ಸಂಜೆ 6.30 ಮಣೂರು ಫ್ರೆಂಡ್ಸ್ ಮಣೂರು ಇವರ ಪ್ರಸ್ತುತಿಯಲ್ಲಿ ಸ್ವರ-ನೃತ್ಯಾಂಜಲಿ, ಸಿನಿಮಾ ನೃತ್ಯ. ರಸಮಂಜರಿ ಮತ್ತು ಅಂಗನವಾಡಿ ಪುಟಾಣಿಗಳಿಂದ ಕಾರ್ಯಕ್ರಮ ವೈವಿಧ್ಯಸಂಜೆ 7.30 ಪ್ರತಿಭಾ ಪುರಸ್ಕಾರ,ಗುರುವಂದನೆ ಯಕ್ಷಗುರು ಶ್ರೀ ಸೀತಾರಾಮ ಶೆಟ್ಟಿ. ಕ್ಕೊಕೂರು ಇವರಿಗೆ ಸನ್ಮಾನ ಕಾರ್ಯಕ್ರಮ, ರಾತ್ರಿ 9.30 ರಘು ಪಾಂಡೇಶ್ವರ ಸಾರಥ್ಯದ ಸಾಧನಾ ಕಲಾತಂಡದವರಿAದ ಸಾಮಾಜಿಕ ನಗೆ ನಾಟಕ ಕಿತಾಪತಿ ಕಿಟ್ಟ, ಎ.12 ಶನಿವಾರ ಬೆಳಿಗ್ಗೆ 10.00 ರಿಂದ ಭಜನೆ ಶ್ರೀ ಗುರು ಮೆಲೋಡೀಸ್ ಬನ್ನೂರು ಭಕ್ತಿ, ಗಾನ, ಸುಧೆ, ಸಂಜೆ 4.30 ರಿಂದ ಭಜನೆ ಶ್ರೀ ರಾಮ ಮಹಿಳಾ ಭಜನಾ ಮಂಡಳಿ, ಮಣೂರು ಇವರಿಂದ ಕಾರ್ಯಕ್ರಮ ಜರಗಲಿದೆ ಎಂದು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ತಿಳಿಸಿದ್ದಾರೆ.
Leave a Reply