
ಕೋಟ: ಇಲ್ಲಿನ ಕೋಟತಟ್ಟು ಬಾರಿಕೆರೆ ಗ್ರಾಮಸ್ಥರಿಂದ ಕೋಟ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮೇಳದ
ಹರಕೆಯ ಸೇವೆಯಾಟ ಬುಧವಾರ ಕೋಟತಟ್ಟು
ವ್ಯಾಪ್ತಿಯಲ್ಲಿ ಜರಗಿತು. ಈ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ, ಗಣಹೋಮಾಧಿಗಳು ವೇ.ಮೂ
ನಾರಾಯಣಮೂರ್ತಿ ಉಡುಪ ಇವರ ನೇತೃತ್ವದಲ್ಲಿ ಗ್ರಾಮದ ಹಿರಿಯರಾದ ಒಳಮಾಡು ಸೋಮ ಮರಕಾಲ ಇವರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಗಳು ಜರಗಿದವು.
ಅಪರಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಮಾಜಿ ಜಿ.ಪಂ ಸದಸ್ಯ.ರಾಘವೇಂದ್ರ ಕಾಂಚನ್, ಕೋಟ ಕಂದಾಯ.ಅಧಿಕಾರಿ ಮಂಜು ಬಿಲ್ಲವ, ಗ್ರಾಮ ಲೆಕ್ಕಾಧಿಕಾರಿ ಚಲುವರಾಜು, ಸಹಾಯಕ ನಾರಾಯಣ
ಗಿಳಿಯಾರು, ಗ್ರಾಮದ ಗ್ರಾಮಸ್ಥರಾದ ರಾಜು ಮರಕಾಲ, ರಂಜೀತ್ ಕುಮಾರ್, ರವಿ ಕುಂದರ್, ಪ್ರಮೋದ್ ಆಚಾರ್, ವಿಜಯ ಪೂಜಾರಿ,ಬಸವ ಪೂಜಾರಿ, ಶ್ರೀಧರ ಗಾಣಿಗ, ಮನೋಹರ್ ಪೂಜಾರಿ, ಅಶೋಕ್ ಕುಂದರ್, ನರಸಿoಹ ತಿಂಗಳಾಯ, ಅಭಿಜಿತ್, ರಾಘವೇoದ್ರ ಪೂಜಾರಿ, ಗಣಪಣ್ಣ, ತಿಮ್ಮಣ್ಣ, ಶೀನ, ಸoತೋಷ್ ಪೂಜಾರಿ, ಸುರೇಶ್ ಗಾಣಿಗ,ಉಮೇಶ್ ಪೂಜಾರಿ,ಸರಸ್ವತಿ ಪೂಜಾರಿ, ಅಕ್ಕಯ್ಯ ಗಾಣಿಗ, ಮತ್ತಿತರರು ಉಪಸ್ಥಿತರಿದ್ದರು.
ರಾತ್ರಿ ನಡೆದ ಹರಕೆಯ ಯಕ್ಷಗಾನ ಸೇವೆಯಾಟದ ಅಂಗವಾಗಿ ರಂಗನಾಯಕಿ ಪ್ರಸoಗ ಪ್ರದರ್ಶನಗೊಂಡಿತು.
ಕೋಟತಟ್ಟು ಬಾರಿಕೆರೆ ಗ್ರಾಮಸ್ಥರಿಂದ ಕೋಟ ಅಮೃತೇಶ್ವರಿ ದಶಾವತಾರ ಯಕ್ಷಗಾನ ಮೇಳದ ಹರಕೆಯ ಸೇವೆಯಾಟದ ಅಂಗವಾಗಿ ಸಾಮೂಹಿಕ ಸತ್ಯನಾರಾಯಣ
ಪೂಜೆ, ಗಣಹೋಮಾಧಿಗಳು ವೇ.ಮೂ ನಾರಾಯಣ ಮೂರ್ತಿ ಉಡುಪ ಇವರ ನೇತೃತ್ವದಲ್ಲಿ ಗ್ರಾಮದ ಹಿರಿಯರಾದ ಒಳಮಾಡು ಸೋಮ ಮರಕಾಲ ಇವರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಗಳು ಜರಗಿದವು.
Leave a Reply