
ಕೋಟ: ಶ್ರೀ ರಾಮ ಗೆಳೆಯರ ಬಳಗ ಕೋಡಿ ಕನ್ಯಾಣ ಇದರ ಆಶ್ರಯದಲ್ಲಿ ತೃತೀಯ ವರ್ಷದ ಶ್ರೀ ರಾಮ ಪರ್ವ
-2025 ಕಾರ್ಯಕ್ರಮ ಎಪ್ರಿಲ್ 12ರಂದು ಸoಜೆ ಕೋಡಿ ಕನ್ಯಾಣದ ಶ್ರೀರಾಮ ಮಂದಿರದ ವಠಾರದಲ್ಲಿ ನಡೆಯಲಿದೆ.
ರಾಮ ಪರ್ವ 2025ರ ಪ್ರಶಸ್ತಿಯನ್ನು ಜಾನಪದ ಕಲಾವಿದೆ ಪದ್ಮಶ್ರೀ ಮಂಜಮ್ಮ ಜೋಗತಿ ಪ್ರದಾನ ನಡೆಲಿದೆ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಪುನಿತ್ ಪೂಜಾರಿ ವಹಿಸಲಿದ್ದು, ಮುಖ್ಯ ಅಭ್ಯಾಗತರಾಗಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಡಾ.ಬಿ.ರಾಘವೇಂದ್ರ ಶೆಟ್ಟಿ , ಗೀತಾನಂದ ಟ್ರಸ್ಟ್ ಪ್ರವರ್ತಕ ಆನಂದ್ ಸಿ ಕುಂದರ್
ಸಹಿತ ಗಣ್ಯರು ಭಾಗವಹಸಲಿದ್ದಾರೆ.
ಸಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ರಾಜ್ಯ ಮಟ್ಟದ ಡಾನ್ಸ್ ಕರಾವಳಿ ಡಾನ್ಸ್ ಖ್ಯಾತಿಯ ಆಯ್ದ ತಂಡಗಳಿoದ ನೃತ್ಯ ಸ್ಪರ್ಧೆ ಜರಗಲಿದೆ ಎಂದು ಸಂಘದ ಕಾರ್ಯದರ್ಶಿ ಅಕ್ಷಿತ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Reply