Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣೂರು ಫ್ರೆಂಡ್ಸ್ 24ನೇ ವಾರ್ಷಿಕೋತ್ಸವ ಸಂಭ್ರಮ

ಕೋಟ: ಮಣೂರು ಫ್ರೆಂಡ್ಸ್ ಮಣೂರು ಇದರ 24ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಎ.11ರ ಶುಕ್ರವಾರ ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ರಥೋತ್ಸವದ ಅಂಗವಾಗಿ ದೇಗುಲದ ವಠಾರದಲ್ಲಿ ಜರಗಲಿದೆ.

ಈ ಪ್ರಯುಕ್ತ ಶೈಕ್ಷಣಿಕ ಸಾಧಕ ನಿವೃತ್ತ ಮುಖ್ಯ ಶಿಕ್ಷಕರಾದ ಎಂ.ಎನ್ ಮಧ್ಯಸ್ಥ , ಕರ್ತವ್ಯಯೋಗಿ ಕಾರ್ ಕೃಷ್ಣ ಪೂಜಾರಿ ಇವರಿಗೆ ಸನ್ಮಾನ,ಪ್ರತಿಭಾ ಪುರಸ್ಕಾರ ಭಾಗವಾಗಿ ಕಲಾವಿದರಾದ ವಿನಯ ಆಚಾರ್ ಕೋಟ, ಐಶ್ವರ್ಯ ಆಚಾರ್ ಕೋಟ ಗೌರವಿಸಲಿದ್ದು,ಅಶಕ್ತರಿಗೆ ನೆರವು, ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಈ ವೇದಿಕೆಯಲ್ಲಿ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ
ಅಂಗನವಾಡಿ ಪುಟಾಣಿಗಳಿಂದ ಡಾನ್ಸ್, ಸಂಗೀತ ಸoಜೆ, ರಾತ್ರಿ 9.30ರಿಂದ ರಘು ಪಾಂಡೇಶ್ವರ ಸಾರಥ್ಯದ ಸಾಧನಾ ಕಲಾತಂಡದಿoದ ಕಿತಾಪತಿ ಕಿಟ್ಟ ನಾಟಕ ಪ್ರದರ್ಶನ- ಗೊಳ್ಳಲಿದೆ ಎಂದು ಫ್ರೆoಡ್ಸ್ ಅಧ್ಯಕ್ಷ ರಾಘವೇಂದ್ರ ಆಚಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *