
ಭಟ್ಕಳ-ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತ ಆಕ್ರಮ ಚಿರೇ ಕಲ್ಲು ಗಣಿಗಾರಿಕೆ ದಂದೆ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ.
ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆ ವ್ಯಾಪ್ತಿಯ ಸರ್ವೇ ನಂಬರ 207/2 ಮತ್ತು ಇದೆ ಸರ್ವೇ ನಂಬರ್ ಅಕ್ಕ ಪಕ್ಕದ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತ ಅಕ್ರಮ ಚಿರೇ ಕಲ್ಲು ಗಣಿಗಾರಿಕೆ ದಂದೆ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ರ ದೂರು ಹೋಗುತ್ತದೆ. ಜಿಲ್ಲಾಧಿಕಾರಿ ಯ ಸೂಚನೆ ಮೇರೆಗೆ ಕಾರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು , ಕಂದಾಯ ಅಧಿಕಾರಿಗಳೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ವೇ ನಂಬರ್ 207/2 ರಲ್ಲಿ 15 ಗುಂಟೆ ಜಾಗದಲ್ಲಿ 02 ಹಾಸು (0.4ಮಿ) ಆಳ ಚಿರೇ ಕಲ್ಲು ತೆಗೆದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಸರ್ವೇ ನಂಬರ್ 207/2 ಭೂ ಮಾಲೀಕ ಪ್ರವೀಣ ಕಿಣಿ ಎನ್ನವ ವ್ಯಕ್ತಿಗೆ ಅಕ್ರಮ ಚಿರೇಕಲ್ಲು ತೆಗೆದ ಬಗ್ಗೆ ಲಿಖಿತ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿರುತ್ತಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ನೋಟಿಸ ತನಗೆ ತಲುಪಿದ ಕೂಡಲೇ ಅಕ್ರಮ ಚಿರೇಕಲ್ಲು ದಂದೆ ನಡೆಯುತ್ತಿದ್ದ ಜಮಿನಿನ ಮಾಲೀಕ ಪ್ರವೀಣ ಕಿಣಿ ಹೊಸ ನಾಟಕ ಒಂದು ಶುರು ಮಾಡಿಕೊಂಡು ತಾನು ಮೂರನೇ ಖಾಸಗಿ ವ್ಯಕ್ತಿ ಅರ್ಜುನ್ ಎನ್ನುವವನಿಗೆ ತನ್ನ ಜಮೀನನ್ನು ಸಮತಟ್ಟು ಮಾಡಲು ನೀಡಿದ್ದು ಅವನು ಅಕ್ರಮವಾಗಿ ಚಿರೇಕಲ್ಲು ತೆಗೆಯುತ್ತಿದ್ದಾನೆ ಎಂದು ಅರ್ಜುನ್ ನ ಮೇಲೆ ಭಟ್ಕಳ ಗ್ರಾಮೀಣ ಪೊಲೀಸರಿಗೆ ದೂರು ನೀಡುತ್ತಾನೆ. ಪೋಲೀಸರು ಜಮೀನಿನ ಮಾಲೀಕನ ದೂರಿನ ಅನ್ವಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿ ಅಕ್ರಮ ಚಿರೇಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಕ್ರಮ ಕೈಗೊಳ್ಳುವಂತೆ ಕಾರವಾರ ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ್ಳಿಗೆ ಪತ್ರ ಬರೆದು ಕ್ರಮ ಸೂಚಿಸುತ್ತಾರೆ.
ಭಟ್ಕಳ ಗ್ರಾಮೀಣ ಠಾಣೆ ಪೊಲೀಸರಿಂದ ಮಾಹಿತಿ ಪತ್ರ ಬಂದ ಹಲವು ವಾರಗಳ ನಂತರ ಕಾಟಾಚಾರಕ್ಕೆ ಎಂಬಂತೆ ಫೆಬ್ರುವರಿ 25 ರಂದು ಸಂಜೆ 6 ಗಂಟೆಗೆ ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆ ವ್ಯಾಪ್ತಿಯ ಸರ್ವೇ ನಂಬರ 207/2 ಅಕ್ರಮ ಚಿರೇಕಲ್ಲು ಗಣಿಗಾರಿಕೆ ದಂದೆ ನಡೆಯುವ ಪ್ರದೇಶಕ್ಕೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸ್ಥಳೀಯ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಆ ಪ್ರದೇಶದಲ್ಲಿ ಅಕ್ರಮ ಚಿರೇಕಲ್ಲು ದಂದೆ ನಡೆತಿರುವುದನ್ನು ಖಚಿತಪಡಿಸಿಕೊಂಡು ಅರ್ಜುನ ಎನ್ನುವ ಖಾಸಾಗಿ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳಲ್ಲೂ ಆತನ ಪೂರ್ಣ ವಿಳಾಸಕ್ಕಾಗಿ ಪುನ್ಹ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಗೆ ಪತ್ರ ಬರೆಯುತ್ತಾರೆ.

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ಪತ್ರ ಬರೆಯುತ್ತಾರೆ. ಫೆಬ್ರುವರಿ 25 ರಂದು ಸಂಜೆ 6 ಗಂಟೆಗೆ ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆ ವ್ಯಾಪ್ತಿಯ ಸರ್ವೇ ನಂಬರ 207/2 ಅಕ್ರಮ ಚಿರೇಕಲ್ಲು ಗಣಿಗಾರಿಕೆ ದಂದೆ ನಡೆಯುವ ಪ್ರದೇಶಕ್ಕೆ ಕಾರವಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸ್ಥಳೀಯ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಮತ್ತು ಪೊಲೀಸರೊಂದಿಗೆ ದಾಳಿ ನಡೆಸಿದ್ದಾಗ ಅದೇ ಅಕ್ರಮ ಚಿರೇಕಲ್ಲು ದಂದೆ ನಡೆಸುವ ಸ್ಥಳದಲ್ಲಿ ಚಿರೇಕಲ್ಲುನ್ನು ತೆಗೆಯುವ 2 ಯಂತ್ರಗಳು ಅಲ್ಲೇ ಇದ್ದರು ಸಹ ಅಧಿಕಾರಿಗಳು ಅದನ್ನು ಸೀಜ ಮಾಡಲಿಲ್ಲ ಮತ್ತು ವಶಪಡಿಸಿಕೊಳ್ಳ ಲಿಲ್ಲ. ಇದರಿಂದ ತಿಳಿಯುತ್ತೆ.
ಈ ಅಧಿಕಾರಿಗಳು ಅಕ್ರಮ ಚಿರೇಕಲ್ಲು ದಂಡೆಕೋರರಿಂದ ಇವರಿಗೆ ದಕ್ಷಿಣೆ ಸಮಯಕ್ಕೆ ಸರಿಯಾಗಿ ಸಂದಯವಾಗುತ್ತಿದೆ ಎನ್ನುವುದು ಮತ್ತು ಕೇವಲ ಕಾಟಾಚಾರಕ್ಕೆ ಈ ದಾಳಿ ನಡೆಸಿದ್ದಾರೆ ಎನ್ನುವುದು ತಿಳಿದು ಬರುತ್ತದೆ. ಕಾರವಾರ ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಅರ್ಜುನ ಎನ್ನುವ ಖಾಸಗಿ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳಲ್ಲೂ ಆತನ ಪೂರ್ಣ ವಿಳಾಸಕ್ಕಾಗಿ ಪುನ್ಹ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಗೆ ಪತ್ರಕ್ಕೆ ಭಟ್ಕಳ ಗ್ರಾಮೀಣ ಪೊಲೀಸರು ಠಾಣೆಯಿಂದ ಆತನ ಪೂರ್ಣ ವಿಳಾಸಸದೊಂದಿಗೆ ಪುನ್ಹ ಪತ್ರ ಬರೆದಿದ್ದಾರೆ. ಈಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಕ್ರಮ ಅಂದರೆ ಈತನಿಗೆ ದಂಡ ವಿದಿಸಿ ಕ್ರಮ ತೆಗೆದುಕೊಂಡಿದ್ದೇನೆ ಎಂದು ಕೈ ತೊಳೆದು ಕೊಳ್ಳಬಹುದೇನೂ ಅಂತ ಕಾಣುತ್ತದೆ.

ಈ ಚಿರೇಕಲ್ಲು ಗಣಿಗಾರಿಕೆ ದಂದೆ ನಡೆಸುವವರು
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮೊದಲು ಅರ್ಜಿ ಸಲ್ಲಿಸಬೇಕು. ನಂತರ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಚಿರೇಕಲ್ಲು ಗಣಿಗಾರಿಕೆ ಗೆ ಆ ಸ್ಥಳ ಯೋಗ್ಯವೋ ಅಂತಾ ಪರಿಶೀಲನೆ ನಡೆಸಿ , ಅರ್ಜಿದಾರಿಂದ ರಾಯಲ್ಟಿ ಶುಲ್ಕ ತುಂಬಿಸಿಕೊಂಡು ಕಾನೂನಿನ ಪ್ರಕಾರ ಅನುಮತಿ ಕೊಡಬೇಕು.ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆಯಲ್ಲಿ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತ ಆಕ್ರಮ ಚಿರೇ ಕಲ್ಲು ಗಣಿಗಾರಿಕೆ ದಂದೆ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದ್ದರು
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸ್ಥಳೀಯ ಅಧಿಕಾರಿಗಳ ಆಗಲಿ , ಕಂದಾಯ ಅಧಿಕಾರಿಗಳ ಆಗಲಿ ಯಾರು ಈ ಅಕ್ರಮ ಚಿರೇಕಲ್ಲು ದಂದೇಕೋರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತಿಲ್ಲ ಯಾಕೆ ಎಂದು ಸ್ಥಳೀಯ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತ ಅಕ್ರಮ ಚಿರೇ ಕಲ್ಲು ಗಣಿಗಾರಿಕೆ ದಂದೆ ನಡೆಯುವ ಪ್ರದೇಶದಲ್ಲಿ ನೂರಾರು ಮನೆಗಳು ಇದ್ದು ಸಾವಿರಾರು ಜನರು ವಾಸವಾಗಿದ್ದಾರೆ. ಸರ್ಕಾರಿ ಪ್ರೌಢಶಾಲೆ ಕೂಡ ಈ ಅಕ್ರಮ ಚಿರೇಕಲ್ಲು ದಂದೆ ನಡೆಯುವ ಸ್ವಲ್ಪ ದೂರ ಅಂತರದಲ್ಲಿ ಪ್ರೌಢಶಾಲೆ ಇದ್ದು , ಈ ಚಿರೇಕಲ್ಲು ತುಂಬಿದ ಲಾರಿಗಳು ಮಾರ್ಗದಿಂದ ಪ್ರತಿದಿನ ಓಡಾಟದಿಂದ ದೀನನಿತ್ಯ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕೂಡ ಇದರಿಂದ ತೊಂದರೆ ಹಾಗೂ ಕಿರಿ ಕಿರಿ ಉಂಟಾಗುತ್ತಿದೆ.
ಈ ಮುಂಡಳ್ಳಿಯ ನೀರಗದ್ದೆ ಗ್ರಾಮ ಭಟ್ಕಳ ತಾಲೂಕ ಆಡಳಿತ ಕಚೇರಿಯಿಂದ ಕೇವಲ 3-4 ಕಿ.ಮಿ ಅತಂರದ ಲ್ಲಿ ಇದ್ದರು ಸಹ ಈ ರೀತಿಯಾಗಿ ಭಟ್ಕಳ ತಾಲೂಕಿನ ಮುಂಡಳ್ಳಿಯ ನೀರಗದ್ದೆಯಲ್ಲಿ ವ್ಯಾಪ್ತಿಯಲ್ಲಿ ಕಳೆದ ಹಲವು ವರ್ಷಗಳಿಂದ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತ ಆಕ್ರಮ ಚಿರೇ ಕಲ್ಲು ಗಣಿಗಾರಿಕೆ ದಂದೆ ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದ್ದರು
ಕಂದಾಯ ಅಧಿಕಾರಿಗಳ ಗಮನಕ್ಕೆ ಬರದೆ ಇರುವುದು ಅಚ್ಚರಿ ಸಂಗಾತಿಯಾಗಿದೆ.
ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟೆಲ್ಲ ನಡೆದರು ಸಹ ಈಗ ಕೂಡ ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತ ಆಕ್ರಮ ಚಿರೇ ಕಲ್ಲು ಗಣಿಗಾರಿಕೆ ದಂದೆ ಯಾರ ಭಯವಿಲ್ಲದೆ ರಾಜಾರೋಷವಾಗಿ ಇದೆ ಪ್ರದೇಶದಲ್ಲಿ ನಡೆಯುತ್ತಿದೆ. ಪತ್ರಿಕೆಯಲ್ಲಿ ವರದಿ ಪ್ರಕಟವಾದ ಮೇಲಾದರೂ ಈ ಭ್ರಷ್ಟ ಅಧಿಕಾರಿಗಳ ನಿದ್ದೆಯಿಂದ ಎಚ್ಚರ ಗೊಂಡು ಈ ಅಕ್ರಮ ಚಿರೇಕಲ್ಲು ದಂದೆ ಯನ್ನು ಸಂಪೂರ್ಣವಾಗಿ ಮಟ್ಟಹಾಕುತ್ತಾರೋ ಇಲ್ಲವೋ ಕಾದುನೊಡಬೇಕು.
Leave a Reply