
ಕೋಟ: ಇಲ್ಲಿನ ಮಣೂರು ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿರುವ ಮಣೂರು ಶ್ರೀ ಮಹಾಲಿಂಗೇಶ್ವರ ಹೇರಂಭ ಮಹಾಗಣಪತಿ ದೇಗುಲದ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊAಡಿತು.
ರಥೋತ್ಸವವು ಕೋಟ ರಾಷ್ಟ್ರೀಯ ಹೆದ್ದಾರಿಯ ಮೂಲಕ ಅಮೃತೇಶ್ವರಿ ದೇಗುಲದ ಸಮೀಪ ಆಗಮಿಸಿ ಭಕ್ತ ಸಮುದಾಯ ಮಹಾಲಿಂಗೇಶ್ವರನ ತೇರನೆಳೆದು ಸಂಭ್ರಮಿಸಿಕೊoಡರು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ವೈಭವದ ರಥೋತ್ಸವ ಸುಮಾರು ಒಂದು ವರೆ ಕಿ.ಮೀ ಸಂಚರಿಸಿದ ರಥೋತ್ಸವದಲ್ಲಿ ಕೀಲು ಕುದುರೆ, ವಿವಿಧ ರೀತಿಯ ಗೊಂಬೆಗಳು, ಸ್ತಬ್ಧ ಚಿತ್ರಗಳು, ಕೇರಳ ಚೆಂಡೆ, ವಾದ್ಯಘೋಷಗಳು, ತಟ್ಟಿರಾಯ ಹೀಗೆ ನಾನಾ ರೀತಿಯ ವಿಶೇಷತೆಗಳು ರಥೋತ್ಸವದಲ್ಲಿ ಕಂಡುಬoತು.
ದೇಗುಲದ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಟ್ರಸ್ಟಿಗಳಾದ ರವಿ ಐತಾಳ್,ಅಶೋಕ್ ಶೆಟ್ಟಿ, ದಿವ್ಯ ಪ್ರಭು,ಅಚ್ಯುತ್ ಹಂದೆ,ಕೃಷ್ಣ ದೇವಾಡಿಗ,ಸುಫಲ ಶೆಟ್ಟಿ,ದಿನೇಶ್ ಆಚಾರ್, ಚಂದ್ರ ಹರ್ತಟ್ಟು,ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಅರುಣಾಚಲ ಮಯ್ಯ,ವಿಷ್ಣುಮೂರ್ತಿ ಮಯ್ಯ, ಮಹೇಶ್ ಹೊಳ್ಳ, ಗೋಪಾಲ ಪೈ, ರಾಜೇಂದ್ರ ಉರಾಳ, ಸೇರಿದಂತೆ ಸಹಸ್ರಾರು ಮಂದಿ ರಥೋತ್ಸವದಲ್ಲಿ ಭಾಗಿಯಾದರು.
ಮಣೂರು ಶ್ರೀ ಮಹಾಲಿಂಗೇಶ್ವರ ಹೇರಂಭ ಮಹಾಗಣಪತಿ ದೇಗುಲದ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಶನಿವಾರ ಸಂಪನ್ನಗೊoಡಿತು.
Leave a Reply