
ಕೋಟ: ಯಕ್ಷಗಾನ ಕಲೆಯಲ್ಲಿರುವ ಸಾಹಿತ್ಯದ ಕಂಪು ಬೇರಾವುದರಲ್ಲಿ ಕಾಣಲು ಸಾಧ್ಯವಿಲ ಅದಕ್ಕಾಗಿಯೇ
ಜಗತ್ತಿನ ಶ್ರೀಮಂತ ಕಲೆಯಾಗಿ ಯಕ್ಷಗಾನ ಹೊರಹೊಮ್ಮಿದೆ ಎಂದು ಯಕ್ಷ ಚಿಂತಕ ಎಚ್ ಸುಜಯೀಂದ್ರ ಹಂದೆ ಅಭಿಪ್ರಾಯಪಟ್ಟರು.
ಶುಕ್ರವಾರ ಕಾರ್ಕಡದ ಭೂಮಿಕ ಆವರಣದ ಸಮೀಪ ಎನ್.ಪಿ.ಎನ್. ಕಾಂಪ್ಲೆಕ್ಸ್ ಪರಿಸರದಲ್ಲಿ ಸಮಾನ ಮನಸ್ಕರು ಏರ್ಪಡಿಸಿದ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ವೇದಿಕೆಯಲ್ಲಿ ಯುಗಾದಿ ವಸಂತ ಪುರಸ್ಕಾರ ಸಭಾವಂದನ ಸಂಮಾನ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿ ಯಕ್ಷಗಾನಕ್ಕೆ ಬಾರಿ ಬೇಡಿಕೆ ಇದ್ದರೂ ಯಕ್ಷ ಕವಿಗಳಿಗೆ ಮನ್ನಣೆ ಸಿಗದಿರುವುದು ಬೇಸರದ ಸಂಗತಿ, ಯುವ ಸಮುದಾಯ ಯಕ್ಷಗಾನದಲ್ಲಿ ಬೆರೆಯಬೇಕು ಭಾಷಾ ಜ್ಞಾನ,ಜೀವನದ ಮೌಲ್ಯಗಳು ಸಿಗುವಂತ್ತಾಗುತ್ತದೆ,ಈ ದಿಸೆಯಲ್ಲಿ ಯಕ್ಷಗಾನದ ರಸದೌತಣಗಳನ್ನು ಊಣಬಡಿಸುವ ಯಕ್ಷಪ್ರೇಮಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಯಕ್ಷಗಾನ ಪ್ರದರ್ಶನಕ್ಕೆ ಸಹಕಾರ ನೀಡಿದವರಿಗೆ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಯಕ್ಷಗಾನ ಪ್ರದರ್ಶನಕ್ಕೆ ಸಾಕ್ಷಿಭೂತರಾದ ಕೆ.ತಾರಾನಾಥ ಹೊಳ್ಳ,ಜನಾರ್ದನ ಹಂದೆ, ಆನoದ್ ಆಚಾರ್, ರಮೇಶ್ ಭಂಡಾರಿ, ಶಶಿಧರ ಮಯ್ಯ, ಚಂದ್ರಶೇಖರ್ ಸೋಮಯಾಜಿ, ಶ್ರೀಕಾಂತ್ ಐತಾಳ್, ನಾಗರಾಜ್ ಹಂದೆ, ಸೂರ್ಯನಾರಾಯಣ ಇವರಗಳನ್ನು ಅಭಿನಂದಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಮಾಧುರಿ ಶ್ರೀರಾಮ್ ಸ್ವಾಗತಿಸಿ ನಿರೂಪಿಸಿ ವಾದಿಸಿದರು. ಬಯಲಾಟದ ಅಂಗವಾಗಿ ಬಬ್ರುವಾಹನ ಕಾಳಗ ಶ್ರೀ ಶಿವಪಂಚಾಕ್ಷರಿ ಮಹಿಮೆ ಯಕ್ಷಗಾನ ಪ್ರದರ್ಶನಗೊಂಡಿತು.
ಕಾರ್ಕಡದ ಭೂಮಿಕ ಆವರಣದ ಸಮೀಪ ಎನ್.ಪಿ.ಎನ್. ಕಾಂಪ್ಲೆಕ್ಸ್ ಪರಿಸರದಲ್ಲಿ ಸಮಾನ ಮನಸ್ಕರು ಏರ್ಪಡಿಸಿದ ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ವೇದಿಕೆಯಲ್ಲಿ ಯುಗಾದಿ ವಸಂತ ಪುರಸ್ಕಾರ ಯಕ್ಷಗಾನ ಪ್ರದರ್ಶನಕ್ಕೆ ಸಾಕ್ಷಿಭೂತರಾದ ಕೆ.ತಾರಾನಾಥ ಹೊಳ್ಳ, ಜನಾರ್ದನ ಹಂದೆ, ಆನoದ್ ಆಚಾರ್, ರಮೇಶ್ ಭಂಡಾರಿ, ಶಶಿಧರ ಮಯ್ಯ, ಚಂದ್ರಶೇಖರ್ ಸೋಮಯಾಜಿ, ಶ್ರೀಕಾಂತ್ ಐತಾಳ್, ನಾಗರಾಜ್ ಹಂದೆ, ಸೂರ್ಯನಾರಾಯಣ ಇವರಗಳನ್ನು ಅಭಿನಂದಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯಕ್ಷ ಚಿಂತಕ ಎಚ್ ಸುಜಯೀಂದ್ರ ಹಂದೆ ಇದ್ದರು.
Leave a Reply