
ಕೋಟ: ಇತ್ತೀಚಿಗಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚುತ್ತಿದ್ದು ಹೆದ್ದಾರಿ ಕಾಮಗಾರಿಯಲ್ಲಿನ ಲೋಪದಿಂದ ಈ ಪ್ರಕರಣಗಳು ಹೆಚ್ಚುತ್ತಿವೆ ಈ ಹಿನ್ನಲ್ಲೆಯಲ್ಲಿ ವಿವಿಧ ಭಾಗಗಳ ಅಪಘಾತ ವಲಯಗಳ ಸ್ಥಳಗಳಿಗೆ ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಕೋಟದ ಮಣೂರು ರಾಷ್ಟ್ರೀಯ ಹೆದ್ದಾರಿಯಿಂದ ಮಾಬುಕಳದ ಹೆದ್ದಾರಿ ವಿವಿಧ ಭಾಗಗಳ ಚರಂಡಿ ಹೂಳೆತ್ತುವ ಹಾಗೂ ಅಪಘಾತ ವಲಯಗಳ ಬಗ್ಗೆ ಮಾಹಿತಿ ಪಡೆದರಲ್ಲದೆ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ಅಪಘಾತ ಹೆಚ್ಚುತ್ತಿದ್ದು ಮಳೆಗಾಲದ ಮಂಜಾಗೃತ ಕ್ರಮವಾಗಿ ಹೆದ್ದಾರಿ ಬದಿಗಳ ಗಿಡ ಗಂಟಿ ಸೇರಿದಂತೆ ನೀರು ಸರಾಗವಾಗಿ ಹರಿಯಲ್ಪಡುವ ಉದ್ದೇಶದಿಂದ ಮಾಹಿತಿ ಕಲೆಹಾಕಿದರು.
ಇತ್ತೀಚಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉನ್ನತ ಅಧಿಕಾರಿ ಮಟ್ಟದಲ್ಲಿ ಸಭೆ ನಡೆಸಿದ್ದು ಹೆದ್ದಾರಿ ಕಾಮಗಾರಿ ಲೋಪಗಳ ಬಗ್ಗೆ ಮಾಹಿತಿ ಕಲೆಹಾಕುವ ಸಂಬoಧ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೋಟ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್,ಗ್ರಾಮ ಲೆಕ್ಕಿಗ ಚಲುವರಾಜು, ತಾಲೂಕು ಯೋಜನಾಧಕಾರಿ ಸಂದೇಶ್ ಶೆಟ್ಟಿ ,ಕೋಟ ಪಂಚಾಯತ್ ಸದಸ್ಯ ಶೇಖರ್.ಜಿ, ಮತ್ತಿತರರು ಉಪಸ್ಥಿತರಿದ್ದರು.
