
ಕೋಟ : ಬಾಂಧವ್ಯ ಫೌಂಡೇಶನ್ ಕರ್ನಾಟಕ ನೆರಳು ಯೋಜನೆಯಿಂದ 13ನೇ ಮನೆಯನ್ನು ಬಂಟ್ವಾಡಿ ನಿವಾಸಿ ಅಮೃತ ಶೆಟ್ಟಿಯವರಿಗೆ ಇತ್ತೀಚಿಗೆ ಹಸ್ತಾಂತರ ಕಾರ್ಯಕ್ರಮ ನೆಡೆಯಿತು..ಮನೆಯ ಬಾಗಿಲು ತೆರೆಯುವ ಮತ್ತು ಮನೆಯ ನಿವಾಸಿ ಅಮೃತ ಶೆಟ್ಟಿಯವರಿಗೆ ಕೀ
ಹಸ್ತಾಂತರ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಟೌನ್ ಪೊಲೀಸ್ ಠಾಣೆಯ
ಎ.ಎಸ್ ಐ ಜಯಕರ್ ಐರೋಡಿ, ಸಾಲಿಕೇರಿ ಅಂಚೆ ಪಾಲಕರಾದ ರೇಷ್ಮಾ ವಾಸುದೇವ ನಾಯಕ್, ಡಾಟ ಜ್ಯೋತಿ ಸಾಮಂತ್, ಕೆ ಸಂತೋಷ್ ನಾಯಕ್, ಪ್ರವೀಣ್ ಪೂಜಾರಿ, ಸಂತೋಷ್ ಪಡುಕರೆ ಮತ್ತಿತರು ಉಪಸ್ಥಿತರಿದ್ದರು,
ಈ ಸಂದರ್ಭದಲ್ಲಿ ಸoಜನಾ ಪೂಜಾರಿ ಎಂಬ ವಿದ್ಯಾರ್ಥಿಗೆ ವಿದ್ಯಾಭ್ಯಾಸ ಸಹಾಯ ನಿಧಿ ರೂ 10,000 ನೀಡಲಾಯಿತು. ಸಾಮಾಜಿಕ ಚಟುವಟಿಕೆ ಮಾಡುತ್ತಿರುವ ಬಾರಕೂರು ಗರಡಿ ಫ್ರೆಂಡ್ಸ್ ಹೊಸಾಳ ಗರಡಿ ಇವರನ್ನು ಸನ್ಮಾನಿಸಲಾಯಿತು. ಬಾಂಧವ್ಯ ಸಂಸ್ಥೆಯ ಮುಖ್ಯಸ್ಥ ದಿನೇಶ್ ಬಾಂಧವ್ಯ ಸ್ವಾಗತಿಸಿ ಯೋಜನೆ ನೆಡೆದು ಬಂದ ದಾರಿ ಕುರಿತು ಮಾತನಾಡಿದರು,
ಬಾಂಧವ್ಯದ ಟ್ರಸ್ಟ್ನ ಸದಸ್ಯ ಪ್ರಣುತ್ ಆರ್ ಗಾಣಿಗ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ಬಾಂಧವ್ಯ ಫೌಂಡೇಶನ್ ಕರ್ನಾಟಕ ನೆರಳು ಯೋಜನೆಯಿಂದ 13ನೇ ಮನೆಯನ್ನು ಬಂಟ್ವಾಡಿ ನಿವಾಸಿ ಅಮೃತ ಶೆಟ್ಟಿಯವರಿಗೆ ಇತ್ತೀಚಿಗೆ ಹಸ್ತಾಂತರ ಕಾರ್ಯಕ್ರಮ ನೆಡೆಯಿತು.