
ಕಾರ್ಕಳ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್ಐ ದಿಲೀಪ್ ಅವರು ವರ್ಗಾವಣೆಗೊಂಡಿದ್ದು ನೂತನ ಎಸ್ಐ ಆಗಿ ಪ್ರಸನ್ನ ಎಂ ಎಸ್ ಅವರು ನಿನ್ನೆ ಅಧಿಕಾರವನ್ನು ಸ್ವೀಕರಿಸಿದರು.
ಮೂಲತಃ ಹಾಸನದವರಾದ ದಿಲೀಪ್ ಅವರು ಪಡುಬಿದ್ರೆ, ಸುಳ್ಯ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿ ನಂತರ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಎಸ್ಐ ಆಗಿ ಕಾರ್ಯನಿರ್ವಹಿಸಿಕೊಂಡಿದ್ದು ಇದೀಗ ವರ್ಗಾವಣೆ ಆಗಿದ್ದಾರೆ.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸನ್ನ ಅವರು ಎನ್ಐಎ ತಂಡದಲ್ಲೂ ಸಕ್ರಿಯರಾಗಿದ್ದರು. ಮೂಲತಃ ಶಿವಮೊಗ್ಗದವರಾದ ಇವರು ಈ ಮೊದಲು ಕಾರ್ಕಳ, ಬಂಟ್ವಾಳ, ಪಡುಬಿದ್ರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಮತ್ತೆ ಕಾರ್ಕಳ ಠಾಣೆಗೆ ವರ್ಗಾವಣೆ ಆಗಿದ್ದಾರೆ.
Leave a Reply