Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಚಿತ್ರಪಾಡಿಯ ಕಾರ್ತಟ್ಟು ಬ್ಯಾಕ್ ಗೆ ಪ.ಪಂ. ನಿಂದ ಸ್ಪಾಟ್ ಗೆ ಮುಕ್ತಿ, ಜಿಲ್ಲಾಧಿಕಾರಿ ವೀಕ್ಷಣೆ, ಶ್ಲಾಘನೆ

ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ಮಾರಿಗುಡಿ ವ್ಯಾಪ್ತಿಯ ರಾಜ್ಯ ಹೆದ್ದಾರಿ ಸಮೀಪವಿರುವ ಸ್ಥಳದಲ್ಲಿ ಸಾಕಷ್ಟು ತ್ಯಾಜ್ಯದ ಗುಂಡಿಯಾಗಿದ್ದು ಈ ಹಿನ್ನಲ್ಲೆಯಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ವಿಶೇಷ ಮುತುವರ್ಜಿಯಲ್ಲಿ ಅದನ್ನು ತೆರವುಗೊಳಿಸಿ ತ್ಯಾಜ್ಯದಲ್ಲೆ ಸಿಕ್ಕ ವಸ್ತುಗಳಿಂದ ವಿವಿಧ ತರಹದ ಆಕೃತಿ ರಚಿಸಿ ಬ್ಯಾಕ್  ಸ್ಪಾಟ್ ಸ್ಥಳದಿಂದ ಮುಕ್ತಿಗೊಳಿಸಿದ್ದಾರೆ, ಈ ದಿಸೆಯಲ್ಲಿ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಭೇಟಿ ನೀಡಿ ವೀಕ್ಷಿಸಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿ ಪರಿಸರದಲ್ಲಿ ತ್ಯಾಜ್ಯ ಎಸೆಯುವ ಮನಸ್ಥಿತಿ ವಿಕೃತಿಯನ್ನು ತೋರ್ಪಡಿಸುತ್ತದೆ ಈ ಹಿನ್ನಲ್ಲೆಯಲ್ಲಿ ಸಮಾಜದಲ್ಲಿ ಜವಾಬ್ದಾರಿ ಅರಿತ ಪ್ರಜ್ಞಾವಂತ ನಾಗರಿಕರು  ಕಸವನ್ನು ಸ್ಥಳೀಯಾಡಳಿತ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನೀಡಲು ಸಲಹೆ ನೀಡಿದರಲ್ಲದೆ ಪಟ್ಟಣಪಂಚಾಯತ್ ಕಾರ್ಯವೈಕರಿಯನ್ನು  ಶ್ಲಾಘಿಸಿದರಲ್ಲದೆ ಅದೇ ಸ್ಥಳದಲ್ಲಿ ಗಿಡಗಳನ್ನು ನೆಡುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ  ಮೋಹನ್ ರಾಜ್,ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ,ಉಪಾಧ್ಯಕ್ಷೆ ಗಿರಿಜಾ ಪೂಜಾರಿ , ಮುಖ್ಯಾಧಿಕಾರಿ ಅಜಯ ಭಂಡಾರ್ಕಾರ್ , ಕಿರಿಯ ಅಭಿಯಂತರ ರಾಜಶೇಖರ್ ,ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ ಉಪಸ್ಥಿತರಿದ್ದರು.

ಸಾಲಿಗ್ರಾಮ ಪಟ್ಟಣಪಂಚಾಯತ್ ಮಾರಿಗುಡಿ ವ್ಯಾಪ್ತಿಯ ರಾಜ್ಯ ಹೆದ್ದಾರಿ ಸಮೀಪವಿರುವ ಬ್ಯಾಕ್ ಸ್ಪಾಟ್ ಸ್ಥಳವನ್ನು ಸ್ವಚ್ಛಗೊಳಿಸಿ ವಿವಿಧ ತರಹದ ಆಕೃತಿಗೊಳಿಸಿ ಡಿಸಿ ಡಾ.ವಿದ್ಯಾ ಕುಮಾರಿ ವಿಕ್ಷೀಸಿದರು.

Leave a Reply

Your email address will not be published. Required fields are marked *