
ಕೋಟ: ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರಯುತ ಸ್ನೇಹಮಯಿ ವಾತಾವರಣ ರೂಪಿಸಿಕೊಳ್ಳಬೇಕು ಈ ಮೂಲಕ ದ್ವೇಷ ಅಸೂಯೆ ಇದರಿಂದ ಮುಕ್ತರಾಗಬೇಕು ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.
ಶುಕ್ರವಾರ ಕೋಟ ಪಡುಕರೆ ಲಕ್ಷ್ಮಿ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜು ಇಲ್ಲಿ ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕöÈತಿಕ ಸ್ಪರ್ಧೆ ಆರೋಹ -2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಕಲೆಯ ಮೂಲಕ ಹೊರಹೊಮ್ಮಿಸಬೇಕು ,ಸಮಾಜದ ಸ್ವಾಸ್ಥ ಸದಾ ಕಾಪಾಡಬೇಕು,ಇದು ವಿದ್ಯಾರ್ಥಿಗಳ ಧ್ಯೇಯವಾಗಬೇಕು ಎಂದರಲ್ಲದೆ ಕಾಲೇಜು ದಿನಗಳಲ್ಲಿ ಕಲಾಸಕ್ತಿ ಉನ್ನತ ಮಟ್ಟಕ್ಕೆ ಏರಬೇಕು,ಮುಂದಿನ ಜೀವನದ ಬಗ್ಗೆ ಯೋಚಿಸಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಕಾಲೇಜು ನಡೆದು ಬಂದ ಆರಂಭಿಕ ದಿನಗಳನ್ನು ಮೆಲುಕು ಹಾಕಿದರು.
ಸಭೆಯ ಅಧ್ಯಕ್ಷತೆಯನ್ನು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು. ಇದೇ ವೇಳೆ ತೀಪುಗಾರರಾಗಿ ನಮಿತಾ,ಗಣೇಶ್ ರಾವ್,ನಿಖಿಲ್ ಶೆಟ್ಟಿ ಇವರುಗಳಿಗೆ ತೀರ್ಪಿನ ಪ್ರತಿ ಹಸ್ತಾಂತರಿಸಲಾಯಿತು. ಮುಖ್ಯ ಅಭ್ಯಾಗತರಾಗಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಉದ್ಯಮಿ ಪ್ರಥ್ವಿರಾಜ್ ಶೆಟ್ಟಿ ,ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಎಚ್ ಕುಂದರ್,ಸಮುದ್ಯತಾ ಗ್ರೂಪ್ಸ್ ನ ಮುಖ್ಯಸ್ಥ ಯೋಗೇಂದ್ರ ತಿಂಗಳಾಯ,ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದಿನ ಕೋಡಿ,ಉದ್ಯಮಿ ನಾಗರಾಜ್ ಮಣೂರು ಪಡುಕರೆ, ಅಲೋಕ್ ಇವೆಂಟ್ಸ್ ಮುಖ್ಯಸ್ಥ ಅಲೋಕ್ ಪುತ್ರನ್,ಕೋಟ ಗ್ರಾಮಪಂಚಾಯತ್ ಸದಸ್ಯ ಭುಜಂಗ ಗುರಿಕಾರ,ವಿದ್ಯಾರ್ಥಿ ಸಂಚಾಲಕ ಪವನ್ ಜಿ,ಕಾಲೇಜು ಪ್ರಾಧ್ಯಾಪಕ ಸಂಚಾಲಕ ಡಾ.ಮನೋಜ್ ಕುಮಾರ್, ಉಪಸ್ಥಿತರಿದ್ದರು .ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೋ ರಮೇಶ್ ಆಚಾರ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್ ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯಕ್ರಮವನ್ನು ಹಳೇ ವಿದ್ಯಾರ್ಥಿ ಸಿಂಚನ ನಿರೂಪಿಸಿದರು.
ಕೋಟ ಪಡುಕರೆ ಲಕ್ಷ್ಮಿ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜು ಇಲ್ಲಿ ವಿಶ್ವ ವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕöÈತಿಕ ಸ್ಪರ್ಧೆ ಆರೋಹ -2025 ಕಾರ್ಯಕ್ರಮವನ್ನು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು. ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಉದ್ಯಮಿ ಪ್ರಥ್ವಿರಾಜ್ ಶೆಟ್ಟಿ ,ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಎಚ್ ಕುಂದರ್ ಮತ್ತಿತರರು ಇದ್ದರು.
Leave a Reply