
ಕೋಟ: ಬೇಸಿಗೆ ಶಿಬಿರಗಳು ಎಲ್ಲೆಡೆ ನಡೆಯುತ್ತಿದೆ ಪ್ರತಿಯೊಂದು ಭಾಗದಲ್ಲೂ ಅರ್ಥಪೂರ್ಣವಾಗಿ ನಡೆಸಲಾಗುತ್ತಿದೆ ಇಂತಹ ಶಿಬಿರಗಳಿಂದ ಮಕ್ಕಳ ಮನೋಸ್ಥರ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಶಿಕ್ಷಕಿ ನಾಗರತ್ನ ಹೇರ್ಳೆ ಅಭಿಪ್ರಾಯಪಟ್ಟರು. ಕೋಟದ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಇಂಡಿಕಾ ಕಲಾ ಬಳಗ ಪಡುಕರೆ, ಪಂಚವರ್ಣ ಯುವಕ ಮಂಡಲ, ಪAಚವರ್ಣ ಮಹಿಳಾ ಮಂಡಲ ಕೋಟ, ಕೋಟ ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು, ಡಿಜಿಟಲ್ ಗ್ರಂಥಾಲಯ ಕೋಟ ಇವರ ಆಶ್ರಯದಲ್ಲಿ ಬೇಸಿಗೆ ಶಿಬಿರ ಚಿತ್ತಾರ ಚಿಣ್ಣರ ಚಿಲಿಪಿಲಿ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಪ್ರಾಥಮಿಕಹಂತದಲ್ಲಿರುವ ಮಕ್ಕಳಿಗೆ ತರಬೇತಿ ನೀಡುವುದು ಸವಾಲಿನ ಕಾರ್ಯ ಆದರೂ ಮಕ್ಕಳ ಪ್ರತಿಭೆ ಅನಾವರಣಕ್ಕೆ ಶಿಬಿರಗಳು ಸಹಕಾರಿಯಾಗಲಿದೆ ಎಂದು ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಸಮರ್ಪಕ ಮಾಹಿತಿ ನೀಡಿದರು.
ಇದೇ ವೇಳೆ ಮೂರು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ನಾಗರತ್ನ ಉಡುಪ,ನಾಗರತ್ನ ಹೇರ್ಳೇ,ಪ್ರಜ್ಞಾ ಜಿ.ಹಂದಟ್ಟು, ಯಮುನಾ ಎಲ್ ಕುಂದರ್, ಸುಜಾತ ಗೋಪಾಲ್ ಇವರುಗಳನ್ನು ಗೌರವಿಸಲಾಯಿತು. ಶಿಬಿರದಲ್ಲಿ ಭಾಗಿಯಾದ ಪುಟಾಣಿಗಳಿಗೆ ಪ್ರಮಾಣಪತ್ರ , ಇತರ ಕೊಡುಗೆಯನ್ನು ನೀಡಲಾಯುತು. ಸಭೆಯ ಅಧ್ಯಕ್ಷತೆಯನ್ನು ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಅಜಿತ್ ದೇವಾಡಿಗ, ಸುಧಾ ಎ ಪೂಜಾರಿ , ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ , ಉಪಾಧ್ಯಕ್ಷ ದಿನೇಶ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಂಡಿಕಾ ಕಲಾ ಬಳಗದ ಸಂಚಾಲಕ ಸಂತೋಷ್ ಕುಮಾರ್ ಕೋಟ ನಿರೂಪಿಸಿದರೆ,ಬಳಗದ ಪ್ರಭಾಕರ್ ಸ್ವಾಗತಿಸಿ ,ವಂದಿಸಿದರು.
ಇoಡಿಕಾ ಕಲಾ ಬಳಗ ಪಡುಕರೆ,ಪಂಚವರ್ಣ ಯುವಕ ಮಂಡಲ,ಪAಚವರ್ಣ ಮಹಿಳಾ ಮಂಡಲ ಕೋಟ,ಕೋಟ ಗ್ರಾಮಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು,ಡಿಜಿಟಲ್ ಗ್ರಂಥಾಲಯ ಕೋಟ ಇವರ ಆಶ್ರಯದಲ್ಲಿ ಬೇಸಿಗೆ ಶಿಬಿರ ಚಿತ್ತಾರ ಚಿಣ್ಣರ ಚಿಲಿಪಿಲಿ ಸಮಾರೋಪ ಸಮಾರಂಭದಲ್ಲಿ ಸoಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ನಾಗರತ್ನ ಉಡುಪ,ನಾಗರತ್ನ ಹೇರ್ಳೇ, ಪ್ರಜ್ಞಾ ಜಿ.ಹಂದಟ್ಟು, ಯಮುನಾ ಎಲ್ ಕುಂದರ್, ಸುಜಾತ ಗೋಪಾಲ್ ಇವರುಗಳನ್ನು ಗೌರವಿಸಲಾಯಿತು.
Leave a Reply