
ವರದಿ : ಅಶ್ವಿನಿ ಅಂಗಡಿ
ಬಾಗಲಕೊಟೆ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟೀ ಬಾಗಲಕೋಟೆ ವಿಧಾನ ಸಭಾ ಮತಕ್ಷೇತ್ರದ ನಗರ ಮಂಡಲ ವತಿಯಂದ ಪ್ರತಿಭಟನೆ ಮಾಡಲಾಯಿತು.
ಶುಕ್ರವಾರ ಸಂಜೆ ನಗರದ ಶಿವಾನಂದ ಜಿನ್‌ನಲ್ಲಿನ ಬಿಜೆಪಿ ಕಾರ್ಯಾಲಯದಿಂದ ಪಾದಯಾತ್ರೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಮಾನವಸರಪಳಿ ನಿರ್ಮಿಸಿ, ಮಂಗಳೂರಿನಲ್ಲಿ ಗುರುವಾರ ರಾತ್ರಿ ಜನಸಾಂದ್ರತೆ ಇರುವ ಸ್ಥಳದಲ್ಲಿಯೇ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಬರ್ಬರವಾಗಿ ಕೋಲೆ ಮಾಡಲಾಗಿದ್ದು ,ಇದು ರಾಜ್ಯ ಸರಕಾರದ ರಕ್ಷಣಾ ವಿಫಲತೆಯನ್ನು ಉಗ್ರವಾಗಿ ಖಂಡಿಸಿ ಪ್ರತಿಭಟಿಸಲಾಯಿತು,
ಈ ಸಂಧರ್ಬದಲ್ಲಿ ಬೆಳಗಾವಿ ಪ್ರಭಾರಿ ಬಸವರಾಜ ಯಂಕAಚಿ. ಜಿಲ್ಲಾ ವಕ್ತಾರರಾದ ಸತ್ಯನಾರಾಯಣ ಹೇಮಾದ್ರಿ ಮಾತನಾಡಿ ಹಿಂದೂಗಳ ಮೇಲೆ ನೀರತಂತರವಾಗಿ ನಡೆಯುವತ್ತಿರುವ ಹಲ್ಲೆಗಳಿಗೆ ಸರಕಾರವೇ ನೇರ ಹೊಣೆ ಎಂದರು.
ಪ್ರತಿಭಟನೇಯಲ್ಲಿ ಗುಂಡುರಾವ ಶಿಂಧೆ, ಡಾ.ಎಂ.ಎಸ್.ದಡ್ಡೆನ್ನವರ, ರಾಜು ರೇವಣಕರ, ಬಸವರಾಜ ಯಂಕAಚಿ,ಸತ್ಯನಾರಾಯಣ ಹೇಮಾದ್ರಿ, ಯಲ್ಲಪ್ಪ ನಾರಾಯಣಿ, ಸಾಗರ ಬಂಡಿ, ಬಸವರಾಜ ಅವರಾದಿ, ರಾಜು ಶಿಂತ್ರೆ, ಶಂಕರ ಗಲಗ, ಅಶೋಕ ಪವಾರ, ದೂಳಪ್ಪ ಕೋಪ್ಪದ, ರವಿ ನಾಯಕ, ಕಾಂತು ಖಾತೆದಾರ,ಆನಂದ ಕೋಟಗಿ, ಕಿರಣ ಭಾಗವಾಡಿ,ರಜತ ದಾವಗೇರಿ, ಹೊನ್ನಪ್ಪ ಅಂಬಿಗೇರ,ಶಿವು ಬೇವೂರ, ಸುರೇಶ ಮಜ್ಜಿಗಿ ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಶ್ರೀಧರ ನಾಗರಬೇಟ್ಟ,ಸೇರಿದಂತೆ ಅನೇಕರು ಭಾಗವಹಿಸಿದ್ದರು.
Leave a Reply