ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಂಗಳ ಗ್ರಾಮದಲ್ಲಿ ಬಸವ ಜಯಂತಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ. ವಚನ ಚಲನವಲನದ ಹರಿಕಾರ, ಸಾಮಾಜಿಕ ಸಮಾನತೆ ಮತ್ತು ಮಾನವತೆಯ ಮಾದರಿಯಾದ ಜಗಜ್ಯೋತಿ ಬಸವೇಶ್ವರರ ಜನ್ಮದಿನದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಾದ್ಯ ಮೇಳ ಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಬಸವಣ್ಣನವರು ‘ಕಾಯಕವೇ ಕೈಲಾಸ’, ‘ಮನುಷ್ಯರಲ್ಲಿ ಭೇದವಿಲ್ಲ’ ಎಂಬ ತತ್ವಗಳನ್ನು ಸಾರಿದ ಮಹಾನ್ ದಾರ್ಶನಿಕರು. ಅವರ ವಚನಗಳು ಇಂದಿಗೂ ಸಾಮಾಜಿಕ ನ್ಯಾಯಕ್ಕೆ ದಾರಿದೀಪವಾಗಿವೆ. ಬಸವಣ್ಣನವರ ಕಲ್ಪನೆಯ ಅನುಸಾರ ಶರಣ ಸಂಸ್ಕೃತಿಯನ್ನು ಗೌರವಿಸುವ ನಿಟ್ಟಿನಲ್ಲಿ ಬಸವಣ್ಣನ ಮೆರವಣಿಗೆಯ ಜೊತೆಗೆ ಎತ್ತುಗಳ ಮೆರವಣಿಗೆ ವಿಶೇಷವಾಗಿ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಕಮಿಟಿ ಮತ್ತು ಕಿತ್ತೂರಾಣಿ ಚೆನ್ನಮ್ಮ ಯುವ ಬ್ರಿಗೇಡ ಯುವಕರು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತಿ ಇದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಪ್ರಾರಂಭಿಸಿ ಬಸವ ನಮನ ಸಲ್ಲಿಸಿದ್ದರು. ಅವರ ಧರ್ಮಚಿಂತನೆಗಳು ಸಮಾನತೆಯ ಭಾವನೆ ಬೆಳೆಸುವಲ್ಲಿ ಮುಂದುವರೆಯಲಿ ಎಂಬ ಸಂದೇಶವನ್ನು ನೀಡಿದರು.
ಬಸವ ಜಯಂತಿ: ಸಾಮಾಜಿಕ ಸಮಾನತೆಯ ಶ್ರೇಷ್ಠ ಸಂದೇಶ



















Leave a Reply