
ಕೋಟ: ಶ್ರೀ ಬೈಲು ಬೊಬ್ಬರ್ಯ ದೈವಸ್ಥಾನ ಕಂಬಳ ಗದ್ದೆಬೆಟ್ಟು, ಮಣೂರು ಇದರ 10ನೇ ವಾರ್ಷಿಕ ಪೂಜಾ ಕಾರ್ಯಕ್ರಮ ಶುಕ್ರವಾರ ಸಂಪನ್ನಗೊoಡಿತು.
ಈ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 5.30ರಿಂದ ಶ್ರೀ ದೇವರಿಗೆ ವಾರ್ಷಿಕ ಪೂಜೆ, ನಂತರ ರಾತ್ರಿ 8 ರಿಂದ ಅನ್ನಸಂತರ್ಪಣೆ ಹಾಗೂ ರಾತ್ರಿ ಶ್ರೀ ಕ್ಷೇತ್ರ ಕಳವಾಡಿ ಇವರಿಂದ ಯಕ್ಷಗಾನ ಬಯಲಾಟ ಶ್ರೀ ಕಳವಾಡಿ ಮಾರಿಕಾಂಬ ಕ್ಷೇತ್ರ ಮಹಾತ್ಮ ಯಕ್ಷಗಾನ ಪ್ರದರ್ಶನಗೊಂಡಿತು.
ಧಾರ್ಮಿಕ ವಿಧಿ ವಿಧಾನಗಳನ್ನು ವೇ.ಮೂ ಮಂಜುನಾಥ್ ಹೊಳ್ಳ ನೇತೃತ್ವದಲ್ಲಿ ಜರಗಿತು.ಧಾರ್ಮಿಕ ಕಾರ್ಯದಲ್ಲಿ ಅನಂತ ಮರಕಾಲ ದಂಪತಿಗಳು ಭಾಗಿಯಾದರು.
ದೈವಸ್ಥಾನದ ಪ್ರಮುಖರಾದ ಎಂ ಎಸ್ ಸಂಜೀವ, ಸುರೇಶ್ ಪೂಜಾರಿ, ನವೀನ್ ಪೂಜಾರಿ, ರಾಜೇಶ್ ಕಂಳಗದ್ದೆ, ಮಹೇಶ್ ಗುರಿಕಾರ, ಸುರೇಶ್ ಬೈಲಮನೆ, ಅರವಿಂದ, ಅನಂತ ಮರಕಾಲ, ಕೃಷ್ಣ,ದಿನೇಶ, ಚಂದ್ರ, ಪ್ರಶಾoತ್ ಪೂಜಾರಿ ,ಉದಯ ಪಿ.ಎಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Leave a Reply