
Lಕೋಟ: ಕೃಷಿ ಪದ್ದತಿಯಲ್ಲಿ ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳು ಅವಶ್ಯ ಈ ನಿಟ್ಟಿನಲ್ಲಿ ಯಾಂತ್ರಿಕತೆಯ ಮೂಲಕ ಸಮಗ್ರ ಕೃಷಿ ಪದ್ದತಿಯನ್ನು ರೂಪಿಸಿಕೊಳ್ಳಿ ಎಂದು ಉಡುಪಿ ಜಿಲ್ಲಾ ಉಪ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯ್ಕ್ ಹೇಳಿದರು.
ಶನಿವಾರ ಕೋಟದ ಗಾಂಧಿ ಮೈದಾನದಲ್ಲಿ ಸಂಸ್ಕçತಿ ಸಂಭ್ರಮ ಟ್ರಸ್ಟ್ ಕೋಟ ಕುಂದಾಪುರ, ವಿಧಾತ್ರಿ ರೈತ ಉತ್ಪಾದಕ ಸಂಸ್ಥೆ ಕೋಟ,ಗೀತಾನಂದ ಫೌಂಡೇಶನ್ ಮಣೂರು,ಕೋಟ ಸಹಕಾರಿ ವ್ಯವಸಾಯಕ ಸಂಘ ಇವರುಗಳ ಸಹಭಾಗಿತ್ವದಡಿ ಹಲಸು ಮಾವು ಹಾಗೂ ಕೃಷಿ ಮೇಳ 2025 ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿಧಾತ್ರಿ ಸಂಸ್ಥೆಯ ಪ್ಲಾಟ್ ಫಾಮ್9 ಬಿಡುಗಡೆ, ಟ್ರೇಡ್ ಮಾಕ್9 ಅನಾವರಣ ಮತ್ತು ರೈತ ಏಕತಾ ಕೇಂದ್ರ ಉದ್ಘಾಟನೆಗೊಳಿಸಿ ಮಾತನಾಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಜತೆಗೆ ಉತ್ಪಾದನಾ ವೆಚ್ಚ ಕಡಿಮೆಗೊಳಿಸುವ ಯೋಜನೆ ರೂಪಿಸಬೇಕು ಈ ಮೂಲಕ ಕೃಷಿ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆ ತರುವ ಅವಶ್ಯಕತೆ ಸಭೆಯಲ್ಲಿ ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾತ್ರಿ ಸಂಸ್ಥೆಗೆ ಸಂಬAಧಿಸಿದ ಯೂಟ್ಯೂಬ್ ಹಾಗೂ ಇನ್ಸ÷್ತಗ್ರಮ್,ಇ ಕಾಮಸ್9 ಇವುಗಳನ್ನು ವೇದಿಕೆಯಲ್ಲಿದ್ದ ಗಣ್ಯರು ಅನಾವರಣಗೊಳಿಸಿದರು.
ಏಕತಾ ಕೇಂದ್ರದ ಕೀ ಅನ್ನು ರಾಜ್ಯದ ಕೃಷಿ ಸಮಾಜದ ಪ್ರತಿನಿಧಿ ಪ್ರದೀಪ್ ಹೆಬ್ಬಾರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರ ಸಾಧಕರಾದ ಬಾಳೆಕುದ್ರುವಿನ ಡೆನಿಸ್ ಕಾರ್ಡೋಜಾ,ಕೇಂಜೂರು ನವೀನ್ ಪೂಜಾರಿ, ಕೋಟದ ಒಳಮಾಡು ಸೋಮ ಮರಕಾಲ, ಕಾವಡಿ ಯೇಸು ಶೆಟ್ಟಿ, ಪಾರಂಪಳ್ಳಿ ರಮೇಶ್ ಹೇರ್ಳೆ,ಕೋಟತಟ್ಟು ಪಡುಕರೆ ಶಿವಮೂರ್ತಿ ಉಪಾಧ್ಯಾ,ಬನ್ನಾಡಿಯ ಚಂದ್ರಕಲಾ ಇವರುಗಳನ್ನು ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಿಧಾತ್ರಿ ಸಂಸ್ಥೆಯ ಎಫ್ ಪಿ ಒ ಕೋಟ ಅಧ್ಯಕ್ಷ ಶ್ರಾವಿತ್ ಎನ್ ಶೆಟ್ಟಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಸಹ ಸಂಶೋಧನಾ ನಿರ್ದೇಶಕ ಡಾ.ಬಿ ಧನಂಜಯ್ ,ವಿಧಾತ್ರಿ ಸಂಸ್ಥೆಯ ನಿರ್ದೇಶಕರಾದ ರಘು ಮಧ್ಯಸ್ಥ ಪಾರಂಪಳ್ಳಿ,ಜ್ಯೋತಿ, ಭೋಜ ಕೂಸ ಪೂಜಾರಿ,ಸಂಸ್ಕöÈತಿ ಸಂಭ್ರದ ಟ್ರಸ್ಟ್ ನ ಸಂಚಾಲಕ ಸತೀಶ್ ಕುಮಾರ್,ಸದಸ್ಯ ಇಬ್ರಾಹಿಂ ಬ್ಯಾರಿ, ಉಪಸ್ಥಿತರಿದ್ದರು. ವಿಧಾತ್ರಿ ಸಂಸ್ಥೆಯ ನಿರ್ದೇಶಕ ಭಾಸ್ಕರ್ ಶೆಟ್ಟಿ ಮಣೂರು ಸ್ವಾಗತಿಸಿದರು. ವಿಧಾತ್ರಿ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ನವನೀತ ಶೆಟ್ಟಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿ ವಂದಿಸಿದರು.
ಶುಕ್ರವಾರ ಹಲವು ಮಾವು ಕೃಷಿ ಮೇಳಕ್ಕೆ ಚಾಲನೆ
ಕೋಟದ ಮೂರು ದಿನಗಳ ಕಾಲ ನಡೆಯುವ ಹಲಸು ಮಾವು ಮತ್ತು ಕೃಷಿಮೇಳಕ್ಕೆ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸ್ಥಳೀಯ ವಿವಿಧ ಸಂಘಸAಸ್ಥೆಗಳನ್ನು ಗುರುತಿಸಿ ಗೌರವಿಸಲಾಯಿತು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅಭ್ಯಾಗತರಾಗಿ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ,ಮಾಜಿ ಶಾಸಕ ರಘುಪತಿ ಭಟ್,ಉದ್ಯಮಿ ದಿನೇಶ್ ಹೆಗ್ಡೆ,ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್,ಕೋಟ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಬಿ ಶೆಟ್ಟಿ, ಉದ್ಯಮಿ ಗೋಪಾಲ ಬಂಗೇರ,ಸAಸ್ಕöÈತಿ ಸಂಭ್ರಮ ಟ್ರಸ್ಡ್ ನ ಸಂಚಾಲಕ ಸತೀಶ್ ಕುಮಾರ್, ರಮೇಶ್ ಮೆಂಡನ್ ,ಕೋಟ ಜಾಮೀಯಾ ಮಸೀದಿ ಉಪಾಧ್ಯಕ್ಷ ವಾಹಿದ್ ಆಲಿ,ಮಣೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್,,ವಿಧಾತ್ರಿ ಸಂಸ್ಥೆಯ ಅಧ್ಯಕ್ಷ ಶ್ರಾವಿತ್ ಶೆಟ್ಟಿ,ಮತ್ತಿತರರು ಉಪಸ್ಥಿತರಿದ್ದರು.
ಕೋಟದ ಗಾಂಧಿ ಮೈದಾನದಲ್ಲಿ ಸಂಸ್ಕçತಿ ಸಂಭ್ರಮ ಟ್ರಸ್ಟ್ ಕೋಟ ಕುಂದಾಪುರ, ವಿಧಾತ್ರಿ ರೈತ ಉತ್ಪಾದಕ ಸಂಸ್ಥೆ ಕೋಟ,ಗೀತಾನಂದ ಫೌಂಡೇಶನ್ ಮಣೂರು,ಕೋಟ ಸಹಕಾರಿ ವ್ಯವಸಾಯಕ ಸಂಘ ಇವರುಗಳ ಸಹಭಾಗಿತ್ವದಡಿ ಹಲಸು ಮಾವು ಹಾಗೂ ಕೃಷಿ ಮೇಳ 2025ರ ಎರಡನೇ ದಿನದ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರ ಸಾಧಕರಾದ ಬಾಳೆಕುದ್ರುವಿನ ಡೆನಿಸ್ ಕಾರ್ಡೋಜಾ,ಕೇಂಜೂರು ನವೀನ್ ಪೂಜಾರಿ,ಕೋಟದ ಒಳಮಾಡು ಸೋಮ ಮರಕಾಲ,ಕಾವಡಿ ಯೇಸು ಶೆಟ್ಟಿ, ಪಾರಂಪಳ್ಳಿ ರಮೇಶ್ ಹೇರ್ಳೆ,ಕೋಟತಟ್ಟು ಪಡುಕರೆ ಶಿವಮೂರ್ತಿ ಉಪಾಧ್ಯಾ,ಬನ್ನಾಡಿಯ ಚಂದ್ರಕಲಾ ಇವರುಗಳನ್ನು ಗೌರವಿಸಲಾಯಿತು. ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಸಹ ಸಂಶೋಧನಾ ನಿರ್ದೇಶಕ ಡಾ.ಬಿ ಧನಂಜಯ್ ,ವಿಧಾತ್ರಿ ಸಂಸ್ಥೆಯ ನಿರ್ದೇಶಕರಾದ ರಘು ಮಧ್ಯಸ್ಥ ಪಾರಂಪಳ್ಳಿ ಮತ್ತಿತರರು ಇದ್ದರು.
Leave a Reply