
ಸಾಮಾನ್ಯವಾಗಿ ಜಡ್ಜ್‌ಗಳು ಅಂದ್ರೆ ಕೋರ್ಟ್ ಹಾಲ್‌ನಲ್ಲಿ ಗಾಂಭೀರ್ಯದಲ್ಲಿ ಕೂತು, ಆರ್ಡರ್ ಮಾಡೋದನ್ನ ನಾವು ನೀವೆಲ್ಲಾ ನೋಡಿದ್ದೇವೆ. ಆದರೆ ಕೋರ್ಟ್ ಹಾಲ್‌ನಿಂದ ಹೊರ ಬಂದು ಜಡ್ಜ್ ತನ್ನ ಕರ್ತವ್ಯ ಪಾಲಿಸಿರೋ ಅಪರೂಪದ ಘಟನೆ ತೆಲಂಗಾಣದ ನಿಜಮಾಬಾದ್‌ನಲ್ಲಿ ನಡೆದಿದೆ.
ಈ ಜಡ್ಜ್ ಸಾಯಿ ಶಿವಾ ಅವರ ಸೂಕ್ಷ್ಮತೆ ಹಾಗೂ ಮಾನವೀಯತೆಗೆ ಒಂದು ಸೆಲ್ಯೂಟ್ ಹೊಡೆಯಲೇ ಬೇಕು. ಯಾಕಂದ್ರೆ ಕೋರ್ಟ್ ಹಾಲ್‌ನಿಂದ ಹೊರ ಬಂದ ಜಡ್ಜ್ ಆಟೋದಲ್ಲೇ ಆರೋಪಿಗಳ ವಿಚಾರಣೆ ನಡೆಸಿ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಲಾಸ್ಯ ನಾಗರಾಜ್ ತಾಯಿ ಮೇಲೆ ಮಾರಣಾಂತಿಕ ಹಲ್ಲೆ; ಆಗಿದ್ದೇನು?
ಏನಿದು ಘಟನೆ?
ಸಯ್ಯಾಮ್ಮ, ಗಂಗಾರಾಮ್ ಎಂಬುವರ ವಿರುದ್ಧ ಸೊಸೆ ವರದಕ್ಷಿಣೆ ಕಿರುಕುಳದ ಕೇಸ್ ದಾಖಲಿಸಿದ್ದರು. ಈ ಕೇಸ್‌ನ ವಿಚಾರಣೆಗೆ ದಂಪತಿ ಪ್ರತಿ ಬಾರಿಯೂ ಕೋರ್ಟ್‌ಗೆ ಹಾಜರಾಗುತ್ತಿದ್ದರು. ಆದರೆ ಈಗ ಗಂಗಾರಾಮ್ ಕಾಲಿಗೆ ಗಂಭೀರ ಗಾಯವಾಗಿದ್ದು, ಎದ್ದು ನಡೆಯಲಾಗದ ಸ್ಥಿತಿ ಬಂದಿದೆ. ಹೀಗಾಗಿ ಗಂಗಾರಾಮ್ ಆಟೋದಲ್ಲೇ ಕೋರ್ಟ್ ಬಳಿ ಬಂದಿದ್ದರು.
ವಕೀಲರು, ಆರೋಪಿ ಕೋರ್ಟ್ ಹಾಲ್‌ಗೆ ಬರುವ ದೈಹಿಕ ಸ್ಥಿತಿಯಲ್ಲಿ ಇಲ್ಲ ಎಂದು ಜಡ್ಜ್‌ಗೆ ತಿಳಿಸಿದ್ದಾರೆ. ಆಗ ತಾವೇ ಕೋರ್ಟ್ ಹಾಲ್‌ನ ಪೀಠದಿಂದ ಎದ್ದು ಬಂದ ಜಡ್ಜ್ ಸಾಯಿ ಶಿವಾ ಅವರು ಆಟೋದಲ್ಲಿ ಇದ್ದ ಆರೋಪಿಗಳ ಹಾಜರಾತಿಯನ್ನು ಖಚಿತಪಡಿಸಿಕೊಂಡಿದ್ದಾರೆ.
ಇದಾದ ಬಳಿಕ ವರದಕ್ಷಿಣೆ ಕಿರುಕುಳ ಕೇಸ್‌ನ ಬಗ್ಗೆ ಎರಡು ಕಡೆಯ ವಾದ ಆಲಿಸಿದ ಜಡ್ಜ್ ಸಾಯಿ ಶಿವಾ ಅವರು ಕೇಸ್ ಅನ್ನು ವಜಾಗೊಳಿಸಿರುವುದಾಗಿ ತಿಳಿಸಿದ್ದಾರೆ. ಜಡ್ಜ್ ಸಾಯಿ ಶಿವಾ ಅವರ ಈ ಮಾದರಿ ನಡೆಗೆ ಸಾರ್ವಜನಿಕರು, ವಕೀಲರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Leave a Reply