Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸ್ನೇಹಕೂಟ ಮಣೂರು ದಶಮಾನೋತ್ಸವ ಸಂಭ್ರಮದ ಲಾಂಛನ ಬಿಡುಗಡೆ
ದಶ ದಿಕ್ಕಿನಲ್ಲೂ ಸ್ನೇಹಕೂಟದ ಸಾಮಾಜಿಕ ಕಾರ್ಯಗಳು ಪಸರಿಸಲಿ -ಸತೀಶ್ ಹೆಚ್ ಕುಂದರ್

ಕೋಟ: ಸ್ನೇಹಕೂಟದ ಸಾಮಾಜಿಕ ಕಾರ್ಯಗಳು ಜನಮನ್ನಣೆ ಗಳಿಸಿವೆ ಅದರಲ್ಲೂ ಪ್ರಸ್ತುತ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತಸಕರ, ಇವರ ಸಾಮಾಜಿಕ ಕಾರ್ಯಗಳು ದಶ ದಿಕ್ಕಿನಲ್ಲೂ ಪಸರಿಸಲಿ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದರು.

ಸೋಮವಾರ ಮಣೂರು ಮಹಾಲಿಂಗೇಶ್ವರ ದೇಗುಲದಲ್ಲಿ ಸ್ನೇಹಕೂಟ ಮಣೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್ ಮಧ್ಯಸ್ಥ ಮಾತನಾಡಿ ಸ್ನೇಹಕೂಟ ವಿಭಿನ್ನವಾಗಿ ಈ ಸಮಾಜದಲ್ಲಿ ಗುರುತಿಸಿಕೊಂಡಿದೆ,ಇದೀಗ ದಶಮ ಸಂಭ್ರದಲ್ಲಿದೆ ಈ ಹತ್ತು ವರ್ಷಗಳಲ್ಲಿ ಅವರ ಕೈಗೊಂಡ ಕಾರ್ಯಗಳು ಅರ್ಥಪೂರ್ಣವಾಗಿದೆ ಇನ್ಬಷ್ಟು ವಿಶಿಷ್ಟ ರೀತಿಯ ಕಾರ್ಯಕ್ರಮಗಳೊಂದಿಗೆ ಸಮಾಜ ಜನಮಾನಸದಲ್ಲಿ ಈ ಸಂಸ್ಥೆ ನೆಲೆಯಾಗಲಿ ಎಂದು ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ ಮಯ್ಯ ವಹಿಸಿ ದಶಮಾನೋತ್ಸವ ಲಾಂಛನದ ರೂಪುರೇಷೆಗಳ ಬಗ್ಗೆ ತಿಳಿಸಿದರು
ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ಅರುಣಾಚಲ ಮಯ್ಯ,ಸ್ನೇಹಕೂಟದ ಪೋಷಕರಾದ ವಿಷ್ಣುಮೂರ್ತಿ ಮಯ್ಯ,ಮಹಾಲಕ್ಷಿö್ಮÃ ಉರಾಳ,ಮಣೂರು ಮಹಾಲಿಂಗೇಶ್ವರ ಸಭಾಂಗಣದಲ್ಲಿ ಕಾರ್ಯದರ್ಶಿ ರಾಜೇಂದ್ರ ಉರಾಳ ಉಪಸ್ಥಿತರಿದ್ದರು. ಸ್ನೇಹಕೂಟದ ವನೀತಾ ಉಪಾಧ್ಯಾ ಸ್ವಾಗತಿಸಿದರೆ,ಸದಸ್ಯೆ ಸುಜಾತ ಎಂ ಬಾಯರಿ ನಿರೂಪಿಸಿದರು.ಸ್ಮೀತರಾಣಿ ವಂದಿಸಿದರು.

ಮಣೂರು ಮಹಾಲಿಂಗೇಶ್ವರ ದೇಗುಲದಲ್ಲಿ ಸ್ನೇಹಕೂಟ ಮಣೂರು ಇದರ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಲಾಂಛನವನ್ನು ಶ್ರೀ ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಬಿಡುಗಡೆಗೊಳಿಸಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಅರುಣಾಚಲ ಮಯ್ಯ,ಸ್ನೇಹಕೂಟದ ಪೋಷಕರಾದ ವಿಷ್ಣುಮೂರ್ತಿ ಮಯ್ಯ,ಮಹಾಲಕ್ಷಿö್ಮÃ ಉರಾಳ, ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ ಮಯ್ಯ ಇದ್ದರು.

Leave a Reply

Your email address will not be published. Required fields are marked *