ಕೋಟ: ಯಕ್ಷಗಾನ ಲೋಕದಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಸ್ತ್ರೀ ವೇಷಧಾರಿ ಪ್ರಸ್ತುತ ಕೋಟ ಅಮೃತೇಶ್ವರಿಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಮಾಧವ ನಾಗೂರು ಇದೀಗ ಯಕ್ಷ ಗೆಜ್ಜೆಗೆ ರಜತ ವರ್ಷಾಚರಣೆ ಸಂಭ್ರಮ ಈ ಹಿನ್ನಲ್ಲೆಯಲ್ಲಿ ಅವರ ಅಭಿಮಾನಿಗಳ ನೇತೃತ್ವದಲ್ಲಿ ಮಾಧವ ನಾಗೂರು ಅಭಿನಂದನಾ ಸಮಿತಿಯ ಮೂಲಕ ನಾಗೂರು ಯಕ್ಷ ಲೋಕದ ಬೆಳ್ಳಿಪಥ ಎಂಬ ಶೀರ್ಷಿಕೆಯಡಿ ಇದೇ ಮೇ.11ರ ಅಪರಾಹ್ನ 2:30ಕ್ಕೆ ಕೋಟದ ಕಾರಂತ ಥೀಂ ಪಾಕ್9ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು
ಬೆಳ್ಳಿಯಾನದಲ್ಲಿರುವ ಮಾಧವ ನಾಗೂರಿಗೆ ಅಭಿಮಾನಗಳ ಸಮ್ಮುಖದಲ್ಲಿ ಅಭಿನಂದನೆ, ಹಿರಿಯ ಯಕ್ಷಕಲಾವಿದ ಆರ್ಗೋಡು ಮೋಹನದಾಸ ಶೆಣೈ ಇವರಿಗೆ ಗುರುವಂದನೆ ಮತ್ತು ನಿಧಿ ಸಮರ್ಪಣೆ ಕಾರ್ಯಕ್ರಮ ನಡಯಲಿದೆ ಅಪರಾಹ್ನ 3.30ಕ್ಕೆ ಬಡಗುತಿಟ್ಟಿನ ಹೆಸರಾಂತ ಅತಿಥಿ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ಮಹಾರಥಿ ಕರ್ಣ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಮೇ.11ಕ್ಕೆ ಪ್ರಸಿದ್ಧ ಸ್ತ್ರೀ ವೇಷಧಾರಿ ಮಾಧವ ನಾಗೂರು ಯಕ್ಷ ಬೆಳ್ಳಿಪಥ ಸಂಭ್ರಮ
















Leave a Reply