
ಕೋಟ: ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಹಾಗೂ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಇವರ ವತಿಯಿಂದ ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿ ನಡೆದ ಶ್ರೀ ಶಂಕರ ಜಯಂತಿ ಕಾರ್ಯಕ್ರಮ ಇತ್ತೀಚಿಗೆ ಜರಗಿತು.
ಸಮಾರಂಭದಲ್ಲಿ ಅತಿಥಿ ಉಪನ್ಯಾಸ ನೀಡಿದ ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು ಅದಮಾರು ಇಲ್ಲಿನ ಸಂಸ್ಕçತ ಪ್ರಾಧ್ಯಾಪಕ ಡಾ. ಜಯ ಶಂಕರ ಕಂಗಣ್ಣಾರು ಮಾತನಾಡಿ ಕ್ರಿ.ಶ. 820 ರಲ್ಲಿಯೇ ಭಾರತದ ನಾಲ್ಕು ಕಡೆಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ ಭಾರತದಲ್ಲಿ ಅದ್ವೆöÊತ ಸಿದ್ಧಾಂತವನ್ನು ಶಾಶ್ವತವಾಗಿ ನೆಲೆಗೊಳಿಸಿ ಇಂದಿಗೂ ಜಗತ್ತಿನಲ್ಲಿ ವೇದ ಧರ್ಮ ಶ್ರೇಷ್ಠವಾಗಿಸುವಲ್ಲಿ ಮಾಡಿದ ಅಪ್ರತಿಮ ಸಾಧನಾ ಮೂರ್ತಿ ಶ್ರೀ ಶಂಕರರು ಎಂದು ಪ್ರತಿಪಾದಿಸಿದರು.
ನಮ್ಮಲ್ಲಿ ಸಾಧಿಸುವ ಮನಸ್ಸಿದ್ದರೆ ಹತ್ತನೇ ವರ್ಷಕ್ಕೆ ಸಾಧಿಸಬಹುದು. ಮನಸ್ಸಿಲ್ಲ ಅಂತಾದ್ರೆ ನೂರು ವರ್ಷದಲ್ಲೂ ಸಾಧಿಸಲಾಗದು ಎಂಬುದಕ್ಕೆ ಭಗವತ್ಪಾದರ ಸಾಧನೆಗಳೇ ಸಾಕ್ಷಿ ಎಂದರು. ಸಮಾರoಭವನ್ನು ಉದ್ಘಾಟಿಸಿದ ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ ಎಸ್ ಕಾರಂತ ತಮ್ಮದೇ ಧೀ ಶಕ್ತಿಯಿಂದ ಸನಾತನ ಧರ್ಮಕ್ಕೆ ಮರುಜೀವ ನೀಡಿದವರು ಶ್ರೀ ಶಂಕರಾಚಾರ್ಯರು. ಇಂತಹ ಪುಣ್ಯ ಪುರುಷರ ಜಯಂತಿ ಆಚರಣೆಯಿಂದ ನಮ್ಮಲ್ಲಿ ವಿಶೇಷವಾದ ಶಕ್ತಿ ಹುಟ್ಟಿ ಕೊಳ್ಳುತ್ತದೆ. ವಿಚಾರಗಳನ್ನು ನಾವು ವಿಮರ್ಶಾತ್ಮಕವಾಗಿ ನೋಡಿ ಉತ್ತಮವಾದುದನ್ನು ಅನುಸರಿಸು ವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಂ.ಶಿವರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು. ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಪಟ್ಟಾಭಿರಾಮ ಸೋಮಯಾಜಿ ವಂದಿಸಿದರು. ಸಭಾದ ಕಾರ್ಯದರ್ಶಿ ಕೆ ರಾಜಾರಾಮ ಐತಾಳ ಕಾರ್ಯಕ್ರಮ ನಿರ್ವಹಿಸಿದರು. ವಸಂತ ವೇದ ಶಿಬಿರದ ಸುಮಾರು ಐನೂರು ವಟುಗಳು, ಹಾಗೂ ಬ್ರಾಹ್ಮಣ ಸಮಾಜದ ಧುರೀಣರು ಉಪಸ್ಥಿತರಿದ್ದರು.
ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಹಾಗೂ ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ಇವರ ವತಿಯಿಂದ ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇಲ್ಲಿ ನಡೆದ ಶ್ರೀ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು ಅದಮಾರು ಇಲ್ಲಿನ ಸಂಸ್ಕçತ ಪ್ರಾಧ್ಯಾಪಕ ಡಾ. ಜಯ ಶಂಕರ ಕಂಗಣ್ಣಾರು ಮಾತನಾಡಿದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಂ.ಶಿವರಾಮ ಉಡುಪ, ಶ್ರೀ ಗುರು ನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ ಎಸ್ ಕಾರಂತ ಮತ್ತಿತರರು ಇದ್ದರು.
Leave a Reply