Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿದ್ಯಾಪೋಷಕ ಆರ್ಥಿಕ ಸಹಾಯಧನಕ್ಕೆ ಅರ್ಜಿ ಆಹ್ವಾನ

ವರದಿ : ಅಶ್ವಿನಿ ಅಂಗಡಿ

ಬಾದಾಮಿ: ಆರ್ಥಿಕ ಸಂಕಷ್ಟದಲ್ಲಿರುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿ/ನಿಯರಿಗೆ ಕಳೆದ 20 ವರ್ಷಗಳಿಂದ ವಿದ್ಯಾ ಪೋಷಕ ಧಾರವಾಡ ಸಂಸ್ಥೆಯು ಆರ್ಥಿಕ ನೆರವನ್ನು ನೀಡುತ್ತಾ ಬಂದಿದ್ದು 2025-26 ಸಾಲಿಗೆ ಆರ್ಥಿಕ ನೆರವನ್ನು ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ನಗರದ ನ್ಯಾಯವಾದಿ, ಸಮಾಜ ಸೇವಕ ಎಂ.ಎಸ್.ಹಿರೇಮಠ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು
ಪ್ರಥಮ ವರ್ಷದ ಪಿಯುಸಿ ವಾಣಿಜ್ಯ ವಿಭಾಗ ಮತ್ತು ಡಿಪ್ಲೋಮಾ ವಿಭಾಗಕ್ಕೆ ಮಾತ್ರ ಸೇರ ಬಯಸುವ ವಿದ್ಯಾರ್ಥಿ/ನಿಯರು ಮಾತ್ರ ಅರ್ಹರಿರುತ್ತಾರೆ. ಸನ್ 2025-26 ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 80% ಅಧಿಕ ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ವರಮಾನ ರೂ. 1.20 ಲಕ್ಷಕ್ಕಿಂತ ಕಡಿಮೆ ಇರಬೇಕು. ಅರ್ಹ ವಿದ್ಯಾರ್ಥಿ/ನಿಯರು ಜೂನ್ 10 ರೊಳಗೆ ವೆಬ್ ಸೈಟ್ ವಿಳಾಸ www.vidyaposhak.ngo.in ಗೆ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 9740332482 ಸಂಪರ್ಕಿಸಲು ಕೋರಿದ್ದಾರೆ

Leave a Reply

Your email address will not be published. Required fields are marked *