187 ವರ್ಷ ಇತಿಹಾಸ ಇರುವಂತಹ ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯು ಪುತ್ತೂರು ತಾಲೂಕಿನಲ್ಲಿಯೇ ಶಾಲಾ ದಾಖಲಾತಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಶೈಕ್ಷಣಿಕ ವರ್ಷ 2024-25 ರಲ್ಲಿ ಪೂರ್ವ ಪ್ರಾಥಮಿಕದ ಮಕ್ಕಳನ್ನು ಸೇರಿಸಿ 570 ಮಕ್ಕಳು ದಾಖಲಾತಿಯನ್ನು ಹೊಂದಿದ್ದರು.
ಎಲ್ಲಾ ಸರಕಾರಿ ಶಾಲೆಗಳ ಹಾಗೆ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವುದನ್ನು ಮನಗಂಡು ಶೈಕ್ಷಣಿಕ ವರ್ಷ 2016 ರಲ್ಲಿ ಆ ಸಮಯದಲ್ಲಿ ಊರ್ಜಿತದಲ್ಲಿದ್ದ ಎಸ್ಡಿಎಂಸಿ ಸಮಿತಿ, ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದವು ತಮ್ಮ ಶಾಲಾ ಅವಧಿಯ ನಂತರ ಮನೆ ಮನೆಗೆ ಭೇಟಿ ಕೊಟ್ಟು ಮಕ್ಕಳ ಪೋಷಕರನ್ನು ಮನವೊಲಿಸಿ ಹಾಗೂ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಖಾತರಿಗೊಳಿಸಿ ದಾಖಲಾತಿ ಹೆಚ್ಚಳವನ್ನು ಮಾಡಲು ಸತತ ಪ್ರಯತ್ನವನ್ನು ಮಾಡಿದ್ದರು, ಹಾಗೂ ಅದಕ್ಕೆ ಪೂರಕವಾಗಿ ಆ ಸಮಯದಲ್ಲಿದ್ದ ಶಿಕ್ಷಣಾಧಿಕಾರಿಗಳ ಹಾಗೂ ಅಧಿಕಾರಿ ವೃಂದದ ಸಹಕಾರವನ್ನು ಈಗಲೂ ಆ ಸಮಯದ ಪೋಷಕರು ಹಾಗೂ ಎಸ್ಡಿಎಂಸಿ ಸದಸ್ಯರುಗಳು ಸ್ಮರಿಸುತ್ತಾರೆ.
ಆದರೆ ಒಂದು ಶಾಲೆಯನ್ನು ಹೇಗೆ ದಾಖಲಾತಿಯಿಲ್ಲದೆ ಮುಚ್ಚ ಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಈಗ ಇರುವಂತಹ ಮುಖ್ಯ ಶಿಕ್ಷಕರು,ಶಿಕ್ಷಕವೃಂದ ಹಾಗೂ ಎಸ್ಡಿಎಂಸಿ ಸಮಿತಿಯು ಸಾಕ್ಷಿಯಾಗಿದೆ.
2024-25 ರ ಕೊನೆಯ ಎಸ್ಡಿಎಂಸಿ ಸಭೆಯಲ್ಲಿ ಶಾಲಾ ದಾಖಲಾತಿ ಮಾಡಲು ಹಾಗೂ ಪೋಷಕರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಸಹಕಾರ ಆಗುವ ನಿಟ್ಟಿನಲ್ಲಿ ಶಾಲೆಯ ಒಟ್ಟು 50 ದಿನದ ರಜೆಯಲ್ಲಿ ಆದಿತ್ಯವಾರ, ಶನಿವಾರ ಮತ್ತು ಸರಕಾರಿ ರಜಾದಿನಗಳನ್ನು ಬಿಟ್ಟು ಇರುವಂತಹ 32 ದಿನಗಳಲ್ಲಿ ಕರ್ತವ್ಯ ದಲ್ಲಿರುವ 17 ಶಿಕ್ಷಕರು ಕೂಡ ಎರೆಡೆರೆಡು ದಿನ ಶಾಲೆಗೆ ಬಂದು ಸಹಕರಿಸಿ ದಾಖಲಾತಿಯನ್ನು ಮಾಡಬೇಕು ಎನ್ನುವ ನಿರ್ಣಯವನ್ನು ತೆಗೆದಿದ್ದು ಕೂಡ ಅದಕ್ಕೆ ಯಾವುದೇ ರೀತಿಯ ಕವಡೆ ಕಾಸಿನ ಬೆಲೆಯನ್ನು ಕಲ್ಪಿಸದೆ, ಶಾಲೆಗೆ ಅವಧಿ ಕೊಟ್ಟ ದಿನವೇ ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಮುಖ್ಗೋಪಾಧ್ಯಾಯರು ಹೋಗಿದ್ದಾರೆ.
ಶಾಲೆಗೆ ದಾಖಲಾತಿಗಾಗಿ, ದಾಖಲೆಗಾಗಿ ಬರುವಂತಹ ಗ್ರಾಮೀಣ ಭಾಗದ ಪೋಷಕರು ಯಾವುದೇ ರೀತಿಯ ಮಾಹಿತಿ ಇಲ್ಲದೆ ಹಿಂತುರುಗಿ ಹೋಗುತ್ತಿರುವುದು ಅಲ್ಲದೆ, ಗ್ರಾಮೀಣ ಶಿಕ್ಷಣ ಮಾಹಿತಿ, ಕನ್ನಡ ಶಾಲೆಯಲ್ಲಿ ವ್ಯಾಸಂಗ ಸರ್ಟಿಫಿಕೇಟ್ ಮೊದಲಾದ ಅತ್ಯವಶ್ಯಕ ದಾಖಲೆಗಳು ಸಿಗದೆ ಮಕ್ಕಳು ಹಾಗೂ ಪೋಷಕರು ಚಿಂತಾಕ್ರಾಂತ ರಾಗಿದ್ದಾರೆ.
ಸ್ಥಳೀಯ ಶಿಕ್ಷಣಾಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದಾಗ ಹಾಗೂ ಮುಖ್ಯೋಪಾಧ್ಯಾಯರು ಮೊಬೈಲ್ ಸ್ವಿಚ್ ಆಫ್ ಮಾಡಿರುವುದನ್ನು ಹೇಳಿದಾಗ ಅವರು ಕೂಡ ಕೈ ಚೆಲ್ಲುತ್ತಿರುವುದು ಪೋಷಕರಿಗೆ ಸರಕಾರಿ ಶಾಲೆಯ ಮೇಲಿನ ವಿಶ್ವಾಸಾಹ್ರತೆಯೇ ದೂರವಾಗುತ್ತಿದೆ.
ಒಂದು ಸರಕಾರಿ ನೌಕರ ಎಂದೂ ಅವರ ಕೇಂದ್ರ ಸ್ಥಾನದಲ್ಲಿರಬೇಕು ಎನ್ನುವ ನಿಯಮ ಈ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಗೆ ಭಾದಕ ಆಗುವುದಿಲ್ಲವೇ?
ಅದಲ್ಲದೆ ಮುಖ್ಯೋಪಾಧ್ಯಾಯರು ಆಗಿದ್ದವರು ತಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಯಾರಿಗೂ ಸಿಗದೆ ಇದ್ದರೂ ಇದರ ಬಗ್ಗೆ ಮೌನವಾಗಿರುವ ಶಿಕ್ಷಣಾಧಿಕಾರಿಗಳು ಕೂಡ ಉಪ್ಪಿನಂಗಡಿ ಸರಕಾರಿ ಶಾಲೆಯನ್ನು ಮುಚ್ಚಿಸುವುದರಲ್ಲಿ ಪಾಲಿದೆಯೇ ಎನ್ನುವ ಸಂಶಯವು ಸಾರ್ವಜನಿಕರದ್ದಾಗಿದೆ.
ಇದರ ಬಗ್ಗೆ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಂದರೂ ಕೂಡ ಯಾವುದೇ ರೀತಿಯ ಸರಿಯಾದ ಸ್ಪಂದನೆ ಸಿಗದೆ ಮಕ್ಕಳು ತಮ್ಮ ಮುಂದಿನ ಶೈಕ್ಷಣಿಕ ಆವಶ್ಯಕತೆಯ ದಾಖಲೆಗಾಗಿ ಜಾತಕ ಪಕ್ಷಿಯಂತೆ ಆಶಂಕೆಯಿಂದ ಕಾಯುತ್ತಾ ಇದ್ದಾರೆ
ಅನಾಥವಾಗಿರುವ ಉಪ್ಪಿನಂಗಡಿ ಮಾದರಿ ಶಾಲೆ.
















Leave a Reply