Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ- ಪಂಚವರ್ಣದ ಸದಸ್ಯರ ಹುಟ್ಟುಹಬ್ಬ ವಿಶಿಷ್ಟ ರೀತಿಯ ಕಾರ್ಯಕ್ರಮ ಆಯೋಜನೆ, ಅನಾಥಾಶ್ರಮಕ್ಕೆ ನೆರವು, ಗುರುವಂದನೆ

ಕೋಟ: ಪಂಚವರ್ಣ  ಯುವಕಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ವತಿಯಿಂದ ಸದಸ್ಯರ ಹುಟ್ಟುಹಬ್ಬಕ್ಕೆ  ವಿಶೇಷ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಈ ಹಿನ್ನಲ್ಲೆಯಲ್ಲಿ ಸಂಸ್ಥೆಯ ಸದಸ್ಯರಾದ ಪ್ರಶಾಂತ್ ಪಡುಕರೆ, ಗೌರವ ಸಲಹೆಗಾರ ಶಿವಮೂರ್ತಿ ಉಪಾಧ್ಯಾ ಇವರ ಹುಟ್ಟು ಹಬ್ಬದ ಅಂಗವಾಗಿ ಹೊಸಬದುಕು ಆಶ್ರಮಕ್ಕೆ 20ಕೆ.ಜಿ. ಉಪ್ಪಿನಕಾಯಿಯನ್ನು ಕೊಡುಗೆಯಾಗಿ ನೀಡಿದರು.
ಇದೇ ಸಂದರ್ಭದಲ್ಲಿ ಪಂಚವರ್ಣಭಜನಾ ಮಂಡಳಿ ಕೋಟ ಇವರಿಂದ ಭಜನಾ ಗುರು ಪ್ರಶಾಂತ್ ಪಡುಕರೆ ಇವರಿಗೆ ಗುರವಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಶೋಭಾ ಗಣೇಶ್,ಹೊಸಬದುಕು ಆಶ್ರಮದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ , ಪಂಚವರ್ಣಭಜನಾ ಮಂಡಳಿ ಕೋಟ ಸಂಚಾಲಕಿ ಗೀತಾ ಶಿವರಾಮ್ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ನಿಕಟಪೂರ್ವ ಅಧ್ಯಕ್ಷೆ ಲಲಿತಾ ಪೂಜಾರಿ ಸ್ವಾಗತಿಸಿ, ಯುವಕ ಮಂಡಲದ ಮಾಜಿ ಅಧ್ಯಕ್ಷ ಅಜಿತ್ ಆಚಾರ್ ನಿರೂಪಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು .

ಪಂಚವರ್ಣದ ಸದಸ್ಯರ ಹುಟ್ಟುಹಬ್ಬ ವಿಶಿಷ್ಟ ರೀತಿಯ ಕಾರ್ಯಕ್ರಮದ ಅಂಗವಾಗಿ ಪಂಚವರ್ಣಭಜನಾ ಮಂಡಳಿ ಕೋಟ ಇವರಿಂದ ಭಜನಾ ಗುರು ಪ್ರಶಾಂತ್ ಪಡುಕರೆ ಇವರಿಗೆ ಗುರವಂದನೆ ಸಲ್ಲಿಸಲಾಯಿತು. ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಅಧ್ಯಕ್ಷ ಮನೋಹರ್ ಪೂಜಾರಿ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಶೋಭಾ ಗಣೇಶ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *