Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಮಖಂಡಿಗೆ ವಿಶ್ವವಿದ್ಯಾಲಯ ತಂದಿರುವದು ಸಾರ್ಥಕವಾಗಿದೆ : ದಿ.ಸಿದ್ದು ನ್ಯಾಮಗೌಡರ ದೂರದೃಷ್ಠಿ ಯೋಜನೆ ಸಫಲಗೊಂಡಿದೆ : ಮಾಜಿ ಶಾಸಕ ಆನಂದ ನ್ಯಾಮಗೌಡ

ಸಾವಳಗಿ: ಮಾಧ್ಯಮ ಕ್ಷೇತ್ರದಲ್ಲಿ ಸುಳ್ಳು ಸುದ್ದಿಗಳು ಸಮುದಾಯಗಳಲ್ಲಿ ಒಡಕು ಮೂಡಿಸುವ ಸಾಧ್ಯತೆಯಿದೆ. ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಭರದಲ್ಲಿ ಮಾಧ್ಯಮದ ದೃಷ್ಟಿಕೋನ ಬದಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಕ್ಷೇತ್ರ ನಾಲ್ಕನೇಯ ಆಧಾರ ಸ್ಥಂಭವಾಗಿದೆ ಎಂದು ಮಾಜಿ ಶಾಸಕ ಆನಂದ ಸಿದ್ದು ನ್ಯಾಮಗೌಡ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಬಾಗಲಕೋಟ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಪ್ರಸಾರಾಂಗ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಸಮಾಜ ಮತ್ತು ಮಾಧ್ಯಮಗಳು ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಸಮಾಜ ಸುಧಾರಣೆಯಲ್ಲಿ ಮಾಧ್ಯಮ ಪಾತ್ರ ಪ್ರಮುಖವಾಗಿದೆ. ಜನರು ಯಾರು ಮಾತುಗಳನ್ನು ನಂಬುತ್ತಾರೆ ಇಲ್ಲವೋ ಆದರೇ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳನ್ನು ಖಂಡಿತವಾಗಿ ನಂಬುತ್ತಾರೆ. ಟಿ.ಆ‌ರ್.ಪಿ. ಹೆಚ್ಚಿಸುವ ಒತ್ತಡದಲ್ಲಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮದಲ್ಲಿ ವಿವರಣೆ ಜೊತೆಗೆ ತೀರ್ಪು ನೀಡುವಂತಹ ಹೇಳಿಕೆಗಳು ಕಡಿಮೆ ಆಗಬೇಕು. ಪತ್ರಿಕೆಗಳಲ್ಲಿ ವರದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದರು.

ಬಾಗಲಕೋಟ ವಿಶ್ವವಿದ್ಯಾಲಯ ಆರಂಭಗೊಂಡು ಎರಡು ವರ್ಷಗಳು ಗತಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವ ಹಿನ್ನಲೆಯಲ್ಲಿ ಜಮಖಂಡಿಗೆ ವಿಶ್ವವಿದ್ಯಾಲಯ ತಂದಿರುವದು ಸಾರ್ಥಕವಾಗಿದೆ. ದಿ.ಸಿದ್ದು ನ್ಯಾಮಗೌಡರ ದೂರದೃಷ್ಠಿ ಯೋಜನೆ ಸಫಲಗೊಂಡಿದೆ. ವೇಗವಾಗಿ ಬೆಳೆಯುತ್ತಿರುವ ಬಾಗಲಕೋಟ ವಿಶ್ವ ವಿದ್ಯಾಲಯಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿದ್ದ ಓಲೇಮಠದ ಆನಂದದೇವರು ಮಾತನಾಡಿ, ಮಾಧ್ಯಮ ಎಂದರೇ ನಿಯತ್ತು ಪಾರದರ್ಶಕ ಕ್ಷೇತ್ರವಾಗಿದೆ. ಮಾಧ್ಯಗಳು ನ್ಯಾಯ ಒದಗಿಸುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಬಡವರ, ನೊಂದವರ ಶಕ್ತಿಯಾಗಿ ಮಾಧ್ಯಮ ಕೆಲಸ ಮಾಡತ್ತಿದೆ. ತಂದೆ-ತಾಯಿ ತಲೆ ತಗ್ಗಿಸುವ ಕೆಲಸವನ್ನು ಮಕ್ಕಳು ಮಾಡಬಾರದು. ಮಾಧ್ಯಮ ಸಮುದಾಯಗಳ ರಕ್ಷಣೆಯ ಶಕ್ತಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

ಬಾಗಲಕೋಟ ವಿಶ್ವವಿದ್ಯಾಲಯ ಕುಲಪತಿ ಪ್ರೋ.ಆನಂದ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ, ತುಮಕೂರಿನ ಡಾ.ಬಿ.ಡಿ.ಮುದ್ದೇಶ, ಮೈಸೂರಿನ ಮಾಧ್ಯಮ ವಿಶ್ಲೇಷಕ ಡಾ.ಅಮ್ಮಸಂದ್ರ ಸುರೇಶ, ಬಳ್ಳಾರಿ ಹಿರಿಯ ಪತ್ರಕರ್ತ ಪ್ರೋ.ಸಿ.ಮುಂಜುನಾಥ, ಬೆಂಗಳೂರು ವಿಶ್ವ ವಿದ್ಯಾಲಯ ನಿವೃತ್ತ ಪ್ರೋ.ಎನ್.ನರಸಿಂಹಮೂರ್ತಿ, ಡಾ.ಆರ್. ನಾಗರಾಜು, ಕುಲಸಚಿವ ಪ್ರೋ.ದಯಾನಂದ ಸಾವಕಾರ, ಡಾ.ಮಲ್ಲಿಕಾರ್ಜುನ ಮರಡಿ, ಚಿದಾನಂದ ಢವಳೇಶ್ವರ ಸಹಿತ ಹಲವರು ಇದ್ದರು.

ಪೂಜಾ ಖಿದ್ರಾಪೂರ ಪ್ರಾರ್ಥಿಸಿದರು. ಪ್ರೋ.ಡಿ.ಜಿ. ಸಾವಕಾರ ಸ್ವಾಗತಿಸಿದರು. ಡಾ.ಆರ್.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಬಿದರಿ ನಿರೂಪಿಸಿದರು. ಶ್ವೇತಾ ಏಳಣ್ಣಿ ವಂದಿಸಿದರು.

Leave a Reply

Your email address will not be published. Required fields are marked *