
ಸಾವಳಗಿ: ಜಮಖಂಡಿ ತಾಲ್ಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಭಾನುವಾರ ಶೂರ್ಪಾಲಿ ಸರ್ಕಾರಿ ಎಮ್.ಪಿ.ಎಸ್ ಶಾಲೆಯಲ್ಲಿ 22ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿಯಾದ ಎಚ್.ಎಮ್.ಉಸ್ತಾದ ದಂಪತಿಗಳನ್ನು ಸನ್ಮಾನಿಸಿದ ಹಳೆಯ ವಿದ್ಯಾರ್ಥಿಗಳು.
ನಮ್ಮ ಶಿಕ್ಷಣ, ಅಧಿಕಾರ, ಸಾಧನೆ, ಶ್ರೀಮಂತಿಕೆ ಇವುಗಳೆಲ್ಲವು ನಾಡಿಗಾಗಿ ಬಳಕೆಯಾಗಬೇಕು ಅಂದಾಗ ಮಾತ್ರ ಒಳ್ಳೆಯ ನಾಡನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಹಾರೂಗೇರಿ ಇಂಚಗೇರಿ ಆಧ್ಯಾತ್ಮ ಮಠದ ಶಶಿಕಾಂತ ಗುರೂಜಿ ಹೇಳಿದರು.
ತಾಲ್ಲೂಕಿನ ಶೂರ್ಪಾಲಿ ಗ್ರಾಮದ ಲಕ್ಷ್ಮೀ ನರಸಿಂಹ ದೇವಸ್ಥಾನದ ಆವರಣದಲ್ಲಿ ಭಾನುವಾರ ಶೂರ್ಪಾಲಿ ಸರ್ಕಾರಿ ಎಮ್.ಪಿ.ಎಸ್ ಶಾಲೆಯಲ್ಲಿ 22ವರ್ಷ ಸೇವೆ ಸಲ್ಲಿಸಿ ವಯೋನಿವೃತ್ತಿಯಾದ ಎಚ್.ಎಮ್.ಉಸ್ತಾದ ಶಿಕ್ಷಕರಿಗೆ ಬಿಳ್ಕೋಡುಗೆ ಹಾಗೂ ಅಭಿನಂದನ ಸಮಾರಂಭದಲ್ಲಿ ಮಾತನಾಡಿದರು. ಜಗತ್ತಿನಲ್ಲಿ ಗುರುವಿಗಿಂತ ದೊಡ್ಡವರು ಯಾರು ಇಲ್ಲ, ಗುರುವಿನ ಸ್ಥಾನ ಬಹಳ ಮಹತ್ವದ ಸ್ಥಾನ, ಗುರುವಿಗೆ ಹಸನಾದ ಹೃದಯ ಸಿಕ್ಕರೆ ಎಂತಹ ತತ್ವಜ್ಞಾನಿಗಳು ತಯಾರಾಗಬಹುದು, ಜ್ಞಾನಕ್ಕೆ ನಿವೃತ್ತಿ ಇಲ್ಲ, ಸರ್ಕಾರದ ನಿಯಮಕ್ಕೆ ಮಾತ್ರ ನಿವೃತ್ತಿ, ನಿಮ್ಮ ಕೈಯಲ್ಲಿ ಇನ್ನೂ ಹಲವಾರು ವಿದ್ಯಾರ್ಥಿಗಳು ತಯಾರಾಗಬೇಕು ಎಂದರು.
ಶೂರ್ಪಾಲಿ ಗ್ರಾಮದ ವೇದಮೂರ್ತಿ ಪಂಚಯ್ಯ ಹಿರೇಮಠ ಮಾತನಾಡಿ ರೈತ, ಸೈನಿಕ ಹಾಗೂ ಶಿಕ್ಷಕರಿಗೆ ಪ್ರತಿಯೊಬ್ಬರು ಗೌರವ ನೀಡಬೇಕು, ಗುರುವಿನ ಪಾದಕ್ಕೆ ಶರಣಾಗತಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಎಚ್.ಎಮ್.ಉಸ್ತಾದ ಶಿಕ್ಷಕರಿಗೆ ಗ್ರಾಮದ ಹಿರಿಯರು, ಯುವಕರು, ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು. ಹಾಗೂ ವಿವಿಧ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
Leave a Reply