News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಡಿ ಸಂಜೀವಿನಿ ಒಕ್ಕೂಟದ ಮಹಾಸಭೆ,ನೂತನ ಅಧ್ಯಕ್ಷರ ಆಯ್ಕೆ

ಕೋಟ:  ಕೋಡಿ ಗ್ರಾಮಪಂಚಾಯತ್ ನ ಸಮನ್ವಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯ ಇತ್ತೀಚಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಸಮನ್ವಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ  ದೀಪಾ ಆರ್ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.

ಕೋಡಿ ಗ್ರಾಮ ಪಂಚಾಯತ್  ಅಧ್ಯಕ್ಷೆ ಗೀತಾ ಖಾರ್ವಿ  ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.ನೂತನ ಅಧ್ಯಕ್ಷರಾಗಿ ಪೂರ್ಣಿಮಾ, ಉಪಾಧ್ಯಕ್ಷರಾಗಿ ಸುಶ್ಮಿತಾ,ಕಾರ್ಯದರ್ಶಿಯಾಗಿ ಸುಮತಿ, ಜತೆಕಾರ್ಯದರ್ಶಿಯಾಗಿ ಪ್ರೇಮಾ ಖಾರ್ವಿ, ಕೋಶಾಧಿಕಾರಿಯಾಗಿ ಜ್ಯೋತಿ ಆಯ್ಕೆಗೊಂಡರು.

ಕಾರ್ಯಕ್ರಮದಲ್ಲಿ ಕೋಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ , ಗ್ರಾಮ ಪಂಚಾಯತ್ ಸದಸ್ಯರಾದ  ಪ್ರಭಾಕರ್ ಮೆಂಡನ್ , ಬ್ರಹ್ಮಾವರ ಘಟಕ ಎನ್ ಆರ್ ಎಲ್ ಎಂನ ವಲಯ ಮೇಲ್ವಿಚಾರಕಿ ಸ್ವಾತಿ ಕುಮಾರಿ ,ಎನ್ ಆರ್ ಎಲ್ ಎಂ ಬಿಆರ್ ಪಿ  ರೀತಾ ಕೋಟ,ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಘಟಕದ ಸಂಯೋಜಕಿ ಶಾರದಾ  ,ಕೃಷಿ ಇಲಾಖಾ ಅಧಿಕಾರಿ  ಸಂಜನಾ ,ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಸಂಯೋಜಕಿಯಾದ   ಅರ್ಪಿತಾ  , ಸಮುದಾಯ ಆರೋಗ್ಯ ಅಧಿಕಾರಿ  ಪರಸಪ್ಪ  ಹಾಗೂ ಉದ್ಯೋಗ ಖಾತ್ರಿ ಯೋಜನೆಯ ತಾಲೂಕು ಅಧಿಕಾರಿ (ಈ ನರೇಗಾ)  ಅಕ್ಷಯ ಕೃಷ್ಣ ಪಿ ಸಭೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಜೀವಿನಿ ಒಕ್ಕೂಟದ ಎಂಬಿಕೆ ಅನಿತಾ  ನಿರ್ವಹಿಸಿದರು. ಎಲ್ ಸಿ ಆರ್ ಪಿ ಆಶಾದೇವಿ ಸ್ವಾಗತಿಸಿದರು.ಒಕ್ಕೂಟದ ಮಾಲತಿ ವಂದಿಸಿದರು.

ಕೋಡಿ ಗ್ರಾಮಪಂಚಾಯತ್ ನ ಸಮನ್ವಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಕೋಡಿ ಗ್ರಾಮ ಪಂಚಾಯತ್  ಅಧ್ಯಕ್ಷೆ ಗೀತಾ ಖಾರ್ವಿ  ದೀಪ ಬೆಳಗಿಸಿ ಉದ್ಘಾಟಿಸಿದರು. ಕೋಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ , ಗ್ರಾಮ ಪಂಚಾಯತ್ ಸದಸ್ಯರಾದ  ಪ್ರಭಾಕರ್ ಮೆಂಡನ್ , ಬ್ರಹ್ಮಾವರ ಘಟಕ ಎನ್ ಆರ್ ಎಲ್ ಎಂನ ವಲಯ ಮೇಲ್ವಿಚಾರಕಿ ಸ್ವಾತಿ ಕುಮಾರಿ ,ಎನ್ ಆರ್ ಎಲ್ ಎಂ ಬಿಆರ್ ಪಿ  ರೀತಾ ಕೋಟ,ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಘಟಕದ ಸಂಯೋಜಕಿ ಶಾರದಾ  ಇದ್ದರು.

Leave a Reply

Your email address will not be published. Required fields are marked *