ಕೋಟ; ಇಲ್ಲಿನ ಕುಂದಾಪುರ ತಾಲೂಕಿನ ಬೇಳೂರಿನ ಪ್ರಜ್ವಲ್ ಕೊಠಾರಿ ಎಂಬ ಯುವಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ಇವರ ಚಿಕಿತ್ಸೆಗೆ ಸುಮಾರು 40ಲಕ್ಷ ರೂ ವೆಚ್ಚಗೊಳ್ಳುವ ಹಿನ್ನಲ್ಲೆಯಲ್ಲಿ ಕೋಟದ ದೇವಿಕಿರಣ್ ಮಿತ್ರ ಬಳಗ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರ ನೇತೃತ್ವದಲ್ಲಿ ಇದೇ ಬರುವ ಜೂನ್ 25ರಂದು ಕೋಟದ ಸಿ ಎ ಬ್ಯಾಂಕ್ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಅತಿಥಿ ಕಲಾವಿದರ ಸಮ್ಮುಖದಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜಿಸಿದೆ.
ಇದರ ಪೋಸ್ಟರನ್ನು ಕೋಟದ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಶುಕ್ರವಾರ ಶ್ರೀ ದೇಗುಲದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಒರ್ವ ಅನಾರೋಗ್ಯಕ್ಕೆ ತುತ್ತಾದ ಮಗುವಿನ ನೆರವಿಗೆ ಯಕ್ಷಗಾನ ಆಯೋಜಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಇಂಥಹ ಸಮಾನಮನ್ಕರ ಒಗ್ಗೂಡಿಕೆಯ ಸಮಾಜಮುಖಿ ಕಾರ್ಯಕ್ಕೆ ಪ್ರತಿಯೊರ್ವ ಕೈಜೋಡಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೆ.ಕೃಷ್ಣ ಕಾಂಚನ್,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ಜಿ.ತಿಮ್ಮ ಪೂಜಾರಿ,ದೇವಿ ಕಿರಣ್ ಕಾಂಪ್ಲೆಕ್ಸ್ ಮಾಲಿಕ ಶ್ರೀಕಾಂತ್ ಶೆಣೈ,ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ, ಚಂದ್ರ ಆಚಾರ್,ಮಾಜಿ ಟ್ರಸ್ಟಿ ಸುಶೀಲ ಸೋಮಶೇಖರ್, ಕೋಟ ಸಹಕಾರಿ ಸಂಘದ ನಿರ್ದೇಶಕರಾದ ಟಿ.ಮಂಜುನಾಥ ಗಿಳಿಯಾರ್,ಮಹೇಶ್ ಶೆಟ್ಟಿ, ಮತ್ಸೊ÷್ಯÃದ್ಯಮಿ ರಾಜೇಂದ್ರ ಸುವರ್ಣ,ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ,ಕೋಟ ಅಮೃತೇಶ್ವರೀ ಮೇಳದ ವ್ಯವಸ್ಥಾಪಕ ಸುರೇಶ್ ಕೋಟ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಕಾರ್ಯದರ್ಶಿ ಚಂದ್ರ ಪೂಜಾರಿ, ಸ್ಥಳೀಯರಾದ ಆನಂದ ದೇವಾಡಿಗ, ದೇವಿ ಕಿರಣ್ ಬಳಗದ ಚೇತನ್ ಬಂಗೇರ, ಅವಿನಾಶ್ ಶೆಟ್ಟಿ ದೊಡ್ಮನೆ,ಜ್ಞಾನೇಶ್ ಆಚಾರ್,ಶಂಕರ್ ಕೋಟ,ಸುಜಾತ ಬಾಯರಿ,ಆದಿತ್ಯ,ಸಂದೀಪ ಸ್ಯಾಂಡಿ, ರತ್ನಾಕರ ಪೂಜಾರಿ ಮತ್ತಿತರರು ಇದ್ದರು.
ಬೇಳೂರಿನ ಪ್ರಜ್ವಲ್ ಕೊಠಾರಿ ಎಂಬ ಯುವಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು ಇವರ ಚಿಕಿತ್ಸೆಗೆಗಾಗಿ ಯಕ್ಷಗಾನ ಆಯೋಜಿಸಿದ್ದು ಇದರ ಪೋಸ್ಟರ್ ಅನ್ನು ಕೋಟದ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ ಕುಂದರ್ ಶುಕ್ರವಾರ ಶ್ರೀ ದೇಗುಲದಲ್ಲಿ ಬಿಡುಗಡೆಗೊಳಿಸಿದರು.















Leave a Reply