Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ- ಅಕ್ಷರಗಳಿಂದಲೇ  ಜೀವನ  -ಅನಂತ್ ನಾಯಕ್

ಕೋಟ: ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆಯಲ್ಲಿ ಒಂದನೇ ತರಗತಿಗೆ ದಾಖಲಾದ ಪುಟಾಣಿಗಳಿಗಾಗಿ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಇತ್ತೀಚಿಗೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ತೆಕ್ಕಟ್ಟೆಯ  ಅನಂತ್ ನಾಯಕ್ ರವರು ವಹಿಸಿ, ಅಕ್ಷರಗಳಿಂದಲೇ ಜೀವನದ ಮೌಲ್ಯ ನಮಗೆ ಅರಿವಾಗಬೇಕಾದರೆ ಅಕ್ಷರ ಜ್ಞಾನ ಅಗತ್ಯ! ಸರಿಯಾದ ಅಕ್ಷರ ಜ್ಞಾನ ಸುಂದರ ಜೀವನವನ್ನ ರೂಪಿಸುವ ಪರ್ವ ಕಾಲ, ಅಕ್ಷರಗಳ ಮೂಲಕ ಅಕ್ಷರಗಳನ್ನು ಪೋಣಿಸಿ ಮಗುವಿನ ಜೀವನಕ್ಕೆ ಸುಂದರ ರೂಪ ನೀಡುವಂತಾಗಲು ಇದುವೇ ವಿಧ್ಯುಕ್ತ ಆರಂಭ ಎಂದರು.

ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು, ಅಕ್ಷರಾಭ್ಯಾಸ ಕಾರ್ಯಕ್ರಮವು ಪುರೋಹಿತ್ ವಾದಿರಾಜ ಭಟ್ ಇವರ ನೇತೃತ್ವದಲ್ಲಿ ನಡೆಯಿತು.  ಮಾತಾಜಿ ಶಕೀಲ ಹೆಗ್ಡೆ ಸ್ವಾಗತಿಸಿ, ವಂದಿಸಿದರು ಮುಖ್ಯೋಪಾಧ್ಯಾಯರಾದ ಹರ್ಷ ಕೋಟೇಶ್ವರ  ನಿರೂಪಿಸಿದರು.

ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆಯಲ್ಲಿ ಒಂದನೇ ತರಗತಿಗೆ ದಾಖಲಾದ ಪುಟಾಣಿಗಳಿಗಾಗಿ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಇತ್ತೀಚಿಗೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು

Leave a Reply

Your email address will not be published. Required fields are marked *