
ಕೋಟ: ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ ಇದರ ವಾರ್ಷಿಕ ಮಹಾಸಭೆ ಜೂ. 6ರಂದು ಪಾಂಡೇಶ್ವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಗ್ರಾಮಪಂಚಾಯತ್ ಅಧ್ಯಕ್ಷ ಸುಶೀಲ ಸದಾನಂದ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಾಮಾಜಿಕ ಭದ್ರತ ಯೋಜನೆ ಬಗ್ಗೆ ಸಾಸ್ತಾನ ಕೆನರಾ ಬ್ಯಾಂಕ್ ಅಧಿಕಾರಿ ದೀಪಿಕಾ, ಪಿಎಂಎಫ್‌ಎAಇ ಯೋಜನೆ ಬಗ್ಗೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಘಟಕ ಇದರ ಜಿಲ್ಲಾ ಸಂಪನ್ಮೂಲ ವ್ಯಕ್ತಿ ವವೆಂಕಟೇಶ್, ಆರೋಗ್ಯದ ಕಾಳಜಿ ಬಗ್ಗೆ ಸಮುದಾಯ ಆರೋಗ್ಯ ಕೇಂದ್ರದ ಸಿಎಚ್‌ಓ ರಜನಿ, ಆರ್ಥಿಕ ಸಾಕ್ಷರಥೆ ಬಗ್ಗೆ ಆರ್ಥಿಕ ಸಾಕ್ಷರತಾ ಸಂಯೋಜಕಿ ಅರ್ಪಿತಾ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಸಂಜೀವಿನಿ ತಾಲೂಕು ಸಂಪನ್ಮೂಲ ವ್ಯಕ್ತಿ ಪಂಚಾಯತ್‌ರಾಜ್ ಇಲಾಖೆ ಇದರ ರೀತಾ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷ ಲೀಲಾವತಿ ಗಂಗಾಧರ್, ಉಪಾಧ್ಯಕ್ಷ ವೈ ಬಿ ರಾಘವೇಂದ್ರ, ಒಕ್ಕೂಟದ ಪದಾಧಿಕಾರಿಗಳು, ಎಂ.ಬಿಕೆ, , ಒಕ್ಕೂಟ ವಿವಿಧ ಇಲಾಖಾ ಸಖಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.ಕಾರ್ಯದರ್ಶಿ ಸುಶ್ಮಾರಾಜ್ ನಡವಳಿ ಮಂಡಿಸಿ,. ಪದಾಧಿಕಾರಿ ಜ್ಯೋತಿ ಸ್ವಾಗತಿಸಿ, ಎಂ.ಬಿಕೆ ಉಷಾ ಗಣೇಶ್ ಪೂಜಾರಿ ವಾರ್ಷಿಕ ಜಮಾಖರ್ಚು ಮಂಡಿಸಿ ಕಾರ್ಯಕ್ರಮ ನಿರೂಪಿಸಿದರು. ಎಲ್‌ಸಿಆರ್‌ಪಿ ಸುಜಾತಾ ವಂದಿಸಿದರು.
ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ ಇದರ ವಾರ್ಷಿಕ ಮಹಾಸಭೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷ ಸುಶೀಲ ಸದಾನಂದ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಜೀವಿನಿ ತಾಲೂಕು ಸಂಪನ್ಮೂಲ ವ್ಯಕ್ತಿ ಪಂಚಾಯತ್‌ರಾಜ್ ಇಲಾಖೆ ಇದರ ರೀತಾ, ಉಪಾಧ್ಯಕ್ಷ ವೈ ಬಿ ರಾಘವೇಂದ್ರ, ಒಕ್ಕೂಟದ ಅಧ್ಯಕ್ಷ ಲೀಲಾವತಿ ಗಂಗಾಧರ್ ಇದ್ದರು.
Leave a Reply