
ಕೋಟ: ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಪ್ರೇರಣೆ ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಚಾರ 45ನೇ ಸರಣಿ ಕಾರ್ಯಕ್ರಮ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಯಡಬೆಟ್ಟು ಪಾಂಡೇಶ್ವರ ಇಲ್ಲಿ ಬುಧವಾರ ನಡೆಯಿತು.
ಅಧ್ಯಕ್ಷತೆಯನ್ನು ವಹಿಸಿದ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್ ಅವರು ಸಾಹಿತ್ಯ ಎಂದರೆ ಭಾವನೆಗಳನ್ನು, ಸಜನಶೀಲತೆಯನ್ನು, ಪಾಂಡಿತ್ಯವನ್ನು ಕೊಡುವ ಪ್ರಬಲ ಮಾಧ್ಯಮ ಎಂದು ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ರಕ್ಷಕರು ಚಟುವಟಿಕೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಜಿಲ್ಲಾ ಕ. ಸಾ. ಪ. ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಕಥೆ ಕವನ ರಚನೆಯನ್ನು ಚಟುವಟಿಕೆಗಳ ಮೂಲಕ ವಿವರಿಸಿದರು. ಪರಿಷತ್‌ನ ಜಿ ನಾಗೇಶ ಮಯ್ಯ, ಅಚ್ಯುತ ಪೂಜಾರಿ, ನರಸಿಂಹಮೂರ್ತಿ ಮಾರ್ಗದರ್ಶನ ನೀಡಿದರು. ಮುಖ್ಯೋಪಾಧ್ಯಾಯನಿ ಇಂದಿರಾ ನಾಯರಿ ಇಂತಹ ಉತ್ತಮ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ನೀಡಿ ಸಹಕರಿಸಿದ ಬಗ್ಗೆ ಧನ್ಯವಾದ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಪ್ರೇರಣೆ ಕಾರ್ಯಕ್ರಮದಲ್ಲಿ ಸಾಹಿತ್ಯ ಸಂಚಾರ 45ನೇ ಸರಣಿ ಕಾರ್ಯಕ್ರಮ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಯಡಬೆಟ್ಟು ಪಾಂಡೇಶ್ವರ ಇಲ್ಲಿ ಬುಧವಾರ ನಡೆಯಿತು. ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್, ಉಡುಪಿ ಜಿಲ್ಲಾ ಕ. ಸಾ. ಪ. ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಅಚ್ಯುತ ಪೂಜಾರಿ, ನರಸಿಂಹಮೂರ್ತಿ ಇದ್ದರು.
Leave a Reply