Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೈಂದೂರು: ಜಾಗ ಮಾರಾಟ ಮಾಡುವುದಾಗಿ ನಂಬಿಸಿ ವ್ಯಕ್ತಿಯೊರ್ವರಿಗೆ 2 ಕೋಟಿ ರೂಪಾಯಿ ವಂಚನೆ

ಬೈಂದೂರು : ದಿನಾಂಕ : 09-06-2025 (ಹೊಸಕಿರಣ ನ್ಯೂಸ್)‌ ತಗ್ಗರ್ಸೆ ಗ್ರಾಮದ ವ್ಯಕ್ತಿ ಯೊರ್ವರಿಗೆ ಜಾಗವನ್ನು ಕೊಡುವುದಾಗಿ ನಂಬಿಸಿ 2 ಕೋಟಿ ರೂಪಾಯಿ ವಂಚನೆ ನಡೆಸಿದ್ದಾರೆಂದು ಇಬ್ಬರು ವ್ಯಕ್ತಿಗಳ ಮೇಲೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು ತಗ್ಗರ್ಸೆ ಗ್ರಾಮದ ನಿವಾಸಿ ಸುಭಾಶ್ (32) ಎಂಬುವರು ಗುತ್ತಿಗೆ ವ್ಯವಹಾರ ಮಾಡಿಕೊಂಡಿದ್ದು ಇವರು ಹೊಂದಿರುವ ವಾಹನಗಳನ್ನು ನಿಲ್ಲಿಸಲು ಯಡ್ತರೆ ಗ್ರಾಮದಲ್ಲಿ ಸೂಕ್ತ ಜಾಗವನ್ನು ಹುಡುಕುತ್ತಿರುವಾಗ ಸುಭಾಶ್ ರವರ ದೊಡ್ಡಪ್ಪನ ಮಗನಾಗಿರುವ 2ನೇ ಆರೋಪಿ ತಗ್ಗರ್ಸೆ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ಶಂಕರ ಪೂಜಾರಿ ತಾನು ಸೂಕ್ತ ಸ್ಥಳವನ್ನು ಹುಡುಕಿ ಕೊಡುತ್ತೇನೆಂದು ಹೇಳಿ ಆರೋಪಿ 1 ನೇ ರೊಕಿ ಡಯಾಸ್‌ ಎಂಬುವವನನ್ನು ಪರಿಚಯಿಸಿಕೊಟ್ಟು ಆರೋಪಿ 1 ನೇ ರೊಕಿ ಡಯಾಸ್‌ ನ ಯಡ್ತರೆ ಗ್ರಾಮದ ಸ.ನಂ 30/3A1 ರಲ್ಲಿ 0.40‌, ಎಕ್ರೆ 30/3A2 ರಲ್ಲಿ 0.14, ಮತ್ತು 30/9 ರಲ್ಲಿ 0.26 ಎಕ್ರೆ ಸ್ಥಳವನ್ನು ತೋರಿಸಿ, ಸೆಂಟ್ಸ್‌ ಒಂದಕ್ಕೆ ರೂಪಾಯಿ 3.5 ಲಕ್ಷದಂತೆ  ಒಟ್ಟು ರೂಪಾಯಿ 2,66,00,000/-ಕ್ಕೆ ಕರಾರು ಪತ್ರ ಮಾಡಿಕೊಂಡಿದ್ದು ರೂಪಾಯಿ 1,80,00,000/- ಬ್ಯಾಂಕ್‌ ಖಾತೆ ಮೂಲಕ ಮತ್ತು 1 ಲಕ್ಷ ನಗದಾಗಿ ಆರೋಪಿ 1 ನೇ ರೊಕಿ ಡಯಾಸ್‌ನಿಗೆ ಸುಭಾಶ್‌ರು ಪಾವತಿಸಿ ಉಳಿದ ಮೊತ್ತವನ್ನು ಕ್ರಯಪತ್ರ ಆಗುವಾಗ ನೀಡಲು ಮಾತುಕತೆ ಮಾಡಿಕೊಂಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಮಾತುಕತೆ ಆಗಿ 15 ದಿನದ ಬಳಿಕ 2ನೇ ಆರೋಪಿಯು ಸುಭಾಶ್‌ ರಲ್ಲಿ ಕ್ರಯ ಕರಾರು ಮಾಡಿಕೊಂಡಿರುವ ಜಾಮೀನು ದಾಖಲೆಗಳಲ್ಲಿ ಕೆಲವು ದೋಷಗಳಿದ್ದು ಅವುಗಳನ್ನು ಸರಿಪಡಿಸಿಕೊಂಡು ಕ್ರಯಪತ್ರ ಮಾಡಿ ಕೊಡುವುದಾಗಿ ತಿಳಿಸಿದ್ದು ನಂತರ ಸುಭಾಶ್‌ ರವರು ದಾಖಲೆಗಳನ್ನು ಪರಿಶೀಲಿಸಿದಾಗ 0.14 ಎಕ್ರೆ ಮತ್ತು 0.26 ಎಕ್ರೆ ಜಮೀನು ಪ್ರಾನ್ಸಿಸ್‌ ಪೀಟರ್‌ ರೆಬೆಲ್ಲೋ ಹೆಸರಿನಲ್ಲಿರುವುದು ಕಂಡುಬಂದು ಈ ಬಗ್ಗೆ ಆರೋಪಿಗಳಲ್ಲಿ ವಿಚಾರಿಸಿದಾಗ ಅವುಗಳನ್ನು 1ನೇ ಆರೋಪಿಯ ಹೆಸರಿಗೆ ನೊಂದಣಿ ಮಾಡಿ ನಂತರ ಕ್ರಯಪತ್ರ ಮಾಡುವುದಾಗಿ ಸುಭಾಶ್‌ ರವರನ್ನು ಆರೋಪಿಗಳು ನಂಬಿಸಿ ಕ್ರಯಪತ್ರ ಬರೆದುಕೊಡುವುದಾಗಿ ಭರವಸೆ ನೀಡುತ್ತಾ ಬಂದಿದ್ದು ನಂತರ ಆರೋಪಿಗಳು ಕ್ರಯ ಕರಾರು ಪತ್ರ ರದ್ದು ಮಾಡಿ ಸುಭಾಶ್‌ ರವರಿಗೆ ನೋಟಿಸು ನೀಡಿದ್ದು ಈ ಬಗ್ಗೆ ಆರೋಪಿಗಳಲ್ಲಿ ವಿಚಾರಿಸಿದಾಗ ಪುನಃ ಆರೋಪಿಗಳು ದಾಖಲೆಪತ್ರಗಳನ್ನು ಸರಿಪಡಿಸಿ ಕ್ರಯಪತ್ರ ಮಾಡಿಕೊಡುವುದಾಗಿ ಹೇಳಿ ಸುಭಾಶ್‌ ರವರನ್ನು ನಂಬಿಸುತ್ತಾ ಬಂದರು.

ಸುಭಾಶ್‌ ರವರಿಗೆ ಕ್ರಯದ ಕರಾರು ಬರೆದುಕೊಟ್ಟ ಜಮೀನು ಸ.ನಂಬ್ರ30/3A1 ರಲ್ಲಿ ಬೈಂದೂರು ಸಾಗರ್‌ ಕ್ರೆಡಿಟ್‌ ಕೋ ಅಪರೇಟಿವ್‌ ಸೊಸೈಟಿಯಲ್ಲಿ ಒಂದು ಕೋಟಿ ಮೊತ್ತದ ಸಾಲವನ್ನು ಪಡೆದುಕೊಂಡಿದ್ದು ದಿನಾಂಕ 07/06/2025 ರಂದು ಈ ಬಗ್ಗೆ ಸುಭಾಶ್‌ ರವರು ಆರೋಪಿಗಳಲ್ಲಿ ವಿಚಾರಿಸಿದಾಗ ಆರೋಪಿಗಳು ಸುಭಾಶ್‌ ರವರಿಗೆ ಬೆದರಿಕೆ ಹಾಕಿ ಸುಭಾಶ್‌ ರವರನ್ನು ನಂಬಿಸಿ ವಂಚಿಸಿರುವುದಾಗಿ ಪೋಲಿಸರಿಗೆ ದೂರು ನೀಡಿದ್ದಾರೆ.

ಸುಭಾಶ್‌ ರವರು ನೀಡಿದ ದೂರಿನಂತೆ ಬೈಂದೂರು ಪೋಲಿಸ್‌ ಠಾಣೆಯಲ್ಲಿ ಕಲಂ: 316(2), 318(2),318(4),351(2) ಜೊತೆಗೆ 3(5) BNS ರಂತೆ ಪ್ರಕರಣ ದಾಖಲೆಯಾಗಿದೆ.

Leave a Reply

Your email address will not be published. Required fields are marked *