
ಕೋಟ: ಐತಿಹಾಸಿಕ ಹಿನ್ನಲ್ಲೆ ಪ್ರಸಿದ್ಧ ದೇವಾಲಯ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಇದರ ನೂತನ ವ್ಯವಸ್ಥಾಪನಾ ಸಮಿತಿಯ ಮೊದಲ ಸಭೆ ಇತ್ತೀಚಿಗೆ ದೇಗುಲದಲ್ಲಿ ಜರಗಿತು.
ಸಮಿತಿಯ ನೂತನ ಅಧ್ಯಕ್ಷ ಹಲಸಿನಕಟ್ಟೆ ಅನಂತ ಪದ್ಮನಾಭ ಐತಾಳರಿಗೆ ಮಾಜಿ ಅಧ್ಯಕ್ಷರಾದ ಗಣೇಶ ಭಟ್ಟ ಇವರು ಅಧಿಕಾರವನ್ನು ಹಸ್ತಾಂತರಿಸಿದರು.
ಈ ವೇಳೆ ಅಧಿಕಾರ ಹಸ್ತಾಂತರಿಸಿದ ಗಣೇಶ ಭಟ್ಟ ನಮ್ಮ ಸಮಿತಿ ಹಲವಾರು ಅಭಿವೃದ್ಧಿ ಕಾರ್ಯವೆಸಗಿದ ತೃಪ್ತಿ ಇದೆ, ಇನ್ನು ಮುಂದಿನ ಸಮಿತಿ ಇದಕ್ಕೂ ಹೆಚ್ಚಿನ ಅಭಿವೃದ್ಧಿ ಸಾಧಿಸುವಂತಾಗಲಿ ಎಂದು ಹಾರೈಸಿದರು. ನೂತನ ಅಧ್ಯಕ್ಷರು ದೇವಳದ ಭಕ್ತರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸುವಲ್ಲಿ ನಮ್ಮ ಸಮಿತಿ ಕಾರ್ಯತತ್ವರವಾಗುತ್ತದೆ.ಶ್ರೀ ದೇವರ ಕೃಪೆಯಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.
ನೂತನ ಸಮಿತಿಯ ಸದಸ್ಯರಾದ ಜಿ.ಶ್ರೀನಿವಾಸ ಅಡಿಗ, ಸದಾಶಿವ ಅಡಿಗ, ರಾಜೇಂದ್ರ ಅಡಿಗ , ಲಕ್ಷಿ÷್ಮÃ ಪ್ರಭು, ಐಶ್ವರ್ಯ ,ಮಣೂರು ಭಾಸ್ಕರ ಶೆಟ್ಟಿ , ಉಮೇಶ ಪೂಜಾರಿ ಕದ್ರಿಕಟ್ಟು, ದಿನೇಶ್ ದೇವಾಡಿಗ , ಆನಂದ ಬತ್ತಡ, ಅನಂತಮೂರ್ತಿ ಭಟ್ಟ ಮುಂತಾದವರು ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರಾದ ಜಿ.ಶ್ರೀನಿವಾಸ ಅಡಿಗ ಇವರು ಸ್ವಾಗತಿಸಿ ಪ್ರಸ್ತಾವನೆಗೈದರು.
ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ನೂತನ ಆಡಳಿತ ಮಂಡಳಿ ಸಭೆ ಇತ್ತೀಚಿಗೆ ಜರಗಿತು. ಸಮಿತಿಯ ನೂತನ ಅಧ್ಯಕ್ಷ ಹಲಸಿನಕಟ್ಟೆ ಅನಂತ ಪದ್ಮನಾಭ ಐತಾಳ, ಮಾಜಿ ಅಧ್ಯಕ್ಷರಾದ ಗಣೇಶ ಭಟ್ಟ, ನೂತನ ಸಮಿತಿಯ ಸದಸ್ಯರಾದ ಜಿ.ಶ್ರೀನಿವಾಸ ಅಡಿಗ, ಸದಾಶಿವ ಅಡಿಗ, ರಾಜೇಂದ್ರ ಅಡಿಗ , ಲಕ್ಷಿ÷್ಮÃ ಪ್ರಭು ಇದ್ದರು.
Leave a Reply