
ಕೋಟ: ಮಾನವನ ಅಭಿವೃದ್ಧಿಗೆ ಪೂರಕವಾಗಿರುವ ಪರಿಸರವನ್ನು ಹಾಳು ಮಾಡುತ್ತಿರುವುದು ತೀರ ವಿಷಾದನೀಯ ಸಂಗತಿ , ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಲ್ಲಿ ನಾವು ಸೋಲುತ್ತಿರುವುದು ದುರಂತದ ಸಂಗತಿ. ಈ ದೃಷ್ಟಿಯಿಂದ ಎಳೆವೆಯಲ್ಲಿನ ಪರಿಸರದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆಯೆಂದು ವಿಶ್ರಾಂತ ವಿಜ್ಞಾನ ಶಿಕ್ಷಕ ಬಾಲಗಂಗಾಧರ ಶೆಟ್ಟಿ ಬೇಳೂರು ನುಡಿದರು.
ಅವರು ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟದ ವಿಶ್ವ ಪರಿಸರ ದಿನದ ಅಂಗವಾಹಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಇಕೋಕ್ಲಬ್ನ ಸಂಚಾಲಕಿರಾದ ಪುಷ್ಬಲತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ ಸ್ವಾಗತಿಸಿ , ಪ್ರಸ್ತಾವಿಕ ಮಾತುಗಳನ್ನು ಆಡಿದರೆ ಇಕೋಕ್ಲಬ್ನ ಅಧ್ಯಕ್ಷೆ ಪ್ರಿಯಾ ಪ್ರಕಾಶ ವಂದಿಸಿದರು.
ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟದ ವಿಶ್ವ ಪರಿಸರ ದಿನದ ಅಂಗವಾಹಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಶ್ರಾಂತ ವಿಜ್ಞಾನ ಶಿಕ್ಷಕ ಬಾಲಗಂಗಾಧರ ಶೆಟ್ಟಿ ಬೇಳೂರು ಮಾತನಾಡಿದರು. ಇಕೋಕ್ಲಬ್ನ ಸಂಚಾಲಕಿರಾದ ಪುಷ್ಬಲತಾ , ಶಾಲಾ ಮುಖ್ಯೋಪಾಧ್ಯಾಯ ವೆಂಕಟೇಶ ಉಡುಪ ಉಪಸ್ಥಿತರಿದ್ದರು.
Leave a Reply