
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ,ಬಿ.ಸಿ ಟ್ರಸ್ಟ್ (ರಿ).ಬ್ರಹ್ಮಾವರ ತಾಲೂಕು ಕೋಟ ವಲಯದ ಕೋಟತಟ್ಟು ಕಾರ್ಯಕ್ಷೇತ್ರದಲ್ಲಿ ನೂತನವಾಗಿ ಶಿಲಾಮಯವಾಗಿರುವ ಶ್ರೀಗುರು ಶನೀಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದಿಂದ ಪರಮಪೂಜ್ಯರು ರೂ. 1 ಲಕ್ಷ ಮೊತ್ತದ ಅನುದಾನವನ್ನ ಮಂಜೂರು ಮಾಡಿದ್ದು, ಈ ಅನುದಾನವನ್ನು ಬ್ರಹ್ಮಾವರ ತಾಲೂಕಿನ ಯೋಜನಾಧಿಕಾರಿ ಶ್ರೀಯುತ ರಮೇಶ್ .ಪಿ .ಕೆ ರವರು ಕ್ಷೇತ್ರದ ಕಾರ್ಯಕ್ರಮ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಸಮಿತಿಯ ಕಾರ್ಯದರ್ಶಿಯವರಾದ ಸತೀಶ್ ಮೆಂಡನ್, ಕಮಿಟಿಯ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಡಿ.ಡಿಯನ್ನು ಕಮಿಟಿಯ ಕಾರ್ಯದರ್ಶಿ ಮತ್ತು ಸಮಿತಿಯರಿಗೆ ಹಸ್ತಾಂತರ ಮಾಡಿದರು ಸದ್ರಿ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ನಾಗೇಶ್ ಪೂಜಾರಿ, ಕೋಟತಟ್ಟು ಪಂಚಾಯತ್ ಸದಸ್ಯರಾದ ವಿದ್ಯಾ ಸಾಲಿಯಾನ್, ರವೀಂದ್ರ ತಿಂಗಳಾಯ, ಸ್ಥಳೀಯ ಸೇವಾ ಪ್ರತಿನಿಧಿಯವರಾದ ಶ್ರೀಲಕ್ಷ್ಮಿ , ಗುಲಾಬಿ ದೇವದಾಸ್,
ಒಕ್ಕೂಟದ ಜೊತೆ ಕಾರ್ಯದರ್ಶಿ ಅನಿತಾ ಪರಮೇಶ್ವರ ಹಾಗೂ ದೇವಸ್ಥಾನದ ಕಮೀಟಿಯ ಸದಸ್ಯರು, ಗ್ರಾಮಸ್ಥರು , ಸಂಘದ ಸದಸ್ಯರು ಭಾಗವಹಿಸಿದ್ದರು
Leave a Reply