
ಕೋಟ: ಮಕ್ಕಳಿಗೆ ಮಾತೃಭಾಷೆ ಜತೆಗೆ ಸಂಸ್ಕಾರ ಭರಿತ ಶಿಕ್ಷಣ ನೀಡಬೇಕು ಆ ಮೂಲಕ ಮಕ್ಕಳನ್ನು ಸುಸಂಸ್ಕöತರನ್ನಾಗಿಸಿ ಎಂದು ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಶಾಂಭವೀ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ ಐತಾಳ್ ನುಡಿದರು.
ಬುಧವಾರ ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು, ಕೋಟ ಇವರ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾಭಿಮಾನಿಗಳು ಉಚಿತವಾಗಿ ಕೊಡಮಾಡುವ ಸಮವಸ್ತ್ರ ನೋಟ್ ಬುಕ್ಸ್ ಸ್ಕೂಲ್‌ಬ್ಯಾಗ್ ಬೆಲ್ಟ್ ಕಲಿಕೋಪಕರಣ ವಿತರಣಾ ಸಮಾರಂಭ ವಿತರಣಾ ಸಮಾರಂಭದಲ್ಲಿ ಮಕ್ಕಳಿಗೆ ಪರಿಕರ ಹಸ್ತಾಂತರಿಸಿ ಮಾತನಾಡಿ ಪೋಷಕರು ಜವಾಬ್ದಾರಿ ಅರಿತು ಮಕ್ಕಳ ಆಗುಹೋಗುಗಳ ಬಗ್ಗೆ ವಿಮರ್ಶೆಗಳನ್ನು ಮಾಡುವ ಅಗತ್ಯತೆ ಪ್ರಸ್ತುತ ದಿನಗಳಲ್ಲಿ ಎದುರಾಗಿದೆ ಅಲ್ಲದೆ ಮಕ್ಕಳನ್ನು ಶಿಕ್ಷಣದ ಜತೆ ಇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲು ಕರೆ ನೀಡಿ ,ಶಿಕ್ಷಣ ಕ್ಷೇತ್ರದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸ್ಥಿತಿಗತಿಯನ್ನು ಕೂಲಂಕಷವಾಗಿ ಅಧ್ಯಯನಗೊಳಿಸಿ ಅದರ ಉನ್ನತಿಗೆ ಶ್ರಮಿಸಲು ಸರಕಾರಕ್ಕೆ ಮನವಿ ಮಾಡಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಶ್ರೀ ಶಾಂಭವೀ ಅನ್ನದಾಯಿನೀ ಟ್ರಸ್ಟ್ ಕೋಟ ಕೊಡಮಾಡಿದ ಉಚಿತ ಸಮವಸ್ತçವನ್ನು ,ನೋಟ್ ಬುಕ್ಸ್ ಗೀತಾನಂದ ಟ್ರಸ್ಟ್ ಮಣೂರು, ಕೋಟ, ದಿ| ಸಾವಿತ್ರಮ್ಮ ಪರಮೇಶ್ವರ ಮಯ್ಯ ಸ್ಮಾರಕ ಅವರ ಮಕ್ಕಳು ಸ್ಥಾಪಿಸಿದ ಶಾಶ್ವತ ದತ್ತಿನಿಧಿಯಿಂದ ಇಂಗ್ಲೀಷ್ ಕಲಿಕಾ ಪುಸ್ತಕವನ್ನು, ಶ್ರೀಮತಿ ವಿಜಯಲಕ್ಷ್ಮಿ ಹೇರ್ಳೆ ವಿಶ್ರಾಂತಿ ಭವನ ಬೆಂಗಳೂರು ಸ್ಥಾಪಿಸಿದ ಕಾರ್ಕಡ ಯಜ್ಞನಾರಾಯಣ ಹೇರ್ಳೆ ಸ್ಮಾರಕ ಶಾಶ್ವತ ನಿದಿಯಿಂದ ಕಲಿಕೋಪಕರಣಗಳನ್ನು ಹಾಗೂ ಶ್ರೀಮತಿ ಇಂದಿರಮ್ಮ ಕೃಷ್ಣ ಮಧ್ಯಸ್ಥಬೆಂಗಳೂರು ಇವರಿಂದ ಬೆಲ್ಟ್ನ್ನು, ಮತ್ತು ಸ್ಕೂಲ್‌ಬ್ಯಾಗ್‌ನ್ನು ಗಿಳಿಯಾರು ಶ್ರೀಮತಿ ಮತ್ತು ಶ್ರೀ ಪಾರ್ವತಮ್ಮ ವೆಂಕಪ್ಪ ಮಯ್ಯ ಸ್ಮರಣಾರ್ಥ, ಕೆ. ಶ್ರೀಧರ ಮಯ್ಯ ವೈಭವ ಎನ್ ಕ್ಲೇವ್ ಬಸವನಗುಡಿ ಬೆಂಗಳೂರು, ಉಚಿತ ಗುರುತುಚೀಟಿಯನ್ನು ಪ್ರಕಾಶ್ ಪ್ರಿಂಟರ್ಸ್ ಕೋಟ ಇವರುಗಳು ಕೊಡಮಾಡಿದ ವಿವಿಧ ತರಹದ ಶೈಕ್ಷಣಿಕ ಪರಿಕರಗಳನ್ನು ಗಣ್ಯರು ಹಸ್ತಾಂತರಿಸಿದರು.
ಅಧ್ಯಕ್ಷತೆಯನ್ನು ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಸದಾನಂದ ಪೂಜಾರಿ ವಹಿಸಿದ್ದರು.ಶಾಲಾ ಶಿಕ್ಷಕ ರಕ್ಷಕ ಸಂಘದ ಸದಸ್ಯ ನಾಗರಾಜ್ ಪ್ರಭು,ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂತೋಷ್ ಪ್ರಭು , ಶಿಕ್ಷಕ ವೃಂದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕ ದಿವಾಕರ್ ರಾವ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ಗಿಳಿಯಾರು ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ದಾನಿಗಳು ಕೊಡಮಾಡಿದ ಶೈಕ್ಷಣಿಕ ಪರಿಕರವನ್ನು ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಶಾಂಭವೀ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ ಐತಾಳ್ ಹಸ್ತಾಂತರಿಸಿದರು. ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಸದಾನಂದ ಪೂಜಾರಿ, .ಶಾಲಾ ಶಿಕ್ಷಕ ರಕ್ಷಕ ಸಂಘದ ಸದಸ್ಯ ನಾಗರಾಜ್ ಪ್ರಭು,ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸಂತೋಷ್ ಪ್ರಭು ,ಶಿಕ್ಷಕ ವೃಂದ ಉಪಸ್ಥಿತರಿದ್ದರು.
Leave a Reply