
ಕೋಟ: ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ ಇವರ ಆಶ್ರಯದಲ್ಲಿ ಇತ್ತೀಚಿಗೆ ನಿಧನರಾದ ಇರ್ವರು ಸಾಮಾಜಿಕ ಸೇವಾಕರ್ತರಾದ ಜಿ. ರತ್ನಾಕರಯ್ಯ ಮತ್ತು ದಂಪತಿ ಹಾಗೂ ಕೆ. ಕಾಳಿಂಗ ಹೊಳ್ಳ ಇವರುಗಳಿಗೆ ನುಡಿನಮನ ಕಾರ್ಯಕ್ರಮ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಶ್ರದ್ಧಾಂಜಲಿ ಸಭೆಯಲ್ಲಿ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ , ದಿ. ಜಿ. ರತ್ನಾಕರಯ್ಯ ದಂಪತಿಗಳು ಹಾಗೂ ಬಳಗದ ಗೌರವ ಸದಸ್ಯರಾದ ಕೆ . ಕಾಳಿಂಗ ಹೊಳ್ಳ ಇವರುಗಳು ಸರಳ ಸಜ್ಜನಿಕೆಯ ಸ್ವಭಾವದ ವ್ಯಕ್ವಿತ್ವ ರೂಡಿಸಿಕೊಂಡು ಗೆಳೆಯರ ಬಳಗದ ಸಮಾಜಮುಖಿ ಕೆಲಸದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಸಭೆಯಲ್ಲಿ ಸಾಲಿಗ್ರಾಮ ಪ. ಪಂಚಾಯತ್ ಸದಸ್ಯ ಸಂಜೀವ ದೇವಾಡಿಗ, ಕೆ. ಚಂದ್ರಶೇಖರ ಸೋಮಯಾಜಿ, ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ, ಕೆ. ವಿಶ್ವೇಶ್ವರ ಹೊಳ್ಳ ಹಾಗೂ ಕೆ. ಸೀತಾರಾಮ ಸೋಮಯಾಜಿ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗೆಳೆಯರ ಬಳಗದ ಕೆ. ಶೀನ, ಕೆ. ಶ್ರೀಪತಿ ಆಚಾರ್ಯ, ಕೆ. ನಾಗಾರಾಜ ಉಪಾಧ್ಯ,ಕೆ. ಶ್ರೀಕಾಂತ ಐತಾಳ,ಕೆ. ರಘ ಭಂಡಾರಿ, ಕೆ ಉದಯ ಐತಾಳ, ಕೆ. ಶೇಖರ, ಕೆ. ಶುಕ್ರಪೂಜಾರಿ,ಕಾರ್ಕಡ ಶಾಲಾ ಮುಖ್ಯೋಪಾಧ್ಯಾಯ ಬಿ. ಎನ್.ಸತ್ಯನಾರಾಯಣ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ ಇವರ ಆಶ್ರಯದಲ್ಲಿ ಇತ್ತೀಚಿಗೆ ನಿಧನರಾದ ಇರ್ವರು ಸಾಮಾಜಿಕ ಸೇವಾಕರ್ತರಾದ ಜಿ. ರತ್ನಾಕರಯ್ಯ ಮತ್ತು ದಂಪತಿ ಹಾಗೂ ಕೆ. ಕಾಳಿಂಗ ಹೊಳ್ಳ ಇವರುಗಳಿಗೆ ನುಡಿನಮನ ಕಾರ್ಯಕ್ರಮ ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಆಯೋಜಿಸಲಾಯಿತು.
Leave a Reply