
ಕೋಟ: ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ, ಯೋಗಬನ,ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ಕೋಟ ಇವರ ಸಹಯೋಗದೊಂದಿಗೆ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಇತ್ತೀಚಿಗೆ ಸರ್ವಕ್ಷೇಮ ಯೋಗಬನ ಮೂಡುಗಿಳಿಯಾರು ಇಲ್ಲಿ ಜರಗಿತು.
ಉಚಿತ ದಂತ ಚಿಕಿತ್ಸಾ ಶಿಬಿರದಲ್ಲಿ ಮಣಿಪಾಲದ ಎಂಸಿಒಡಿಎಸ್ ಮುಖ್ಯಸ್ಥೆ ಡಾ. ಯತಿಕಾ ನಾಯಕ್, ಎಚ್‌ಒಡಿ ದಂತ ವೈದ್ಯರಾದ ಡಾ. ಕಲ್ಯಾಣ ಚಕ್ರವರ್ತಿ ಮಾರ್ಗದರ್ಶನದಲ್ಲಿ 50 ಕ್ಕೂ ಹೆಚ್ಚು ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸರ್ವಕ್ಷೇಮ ಯೋಗಬನ ಸಹ ನಿರ್ದೇಶಕ, ಡಾ.ಶ್ರೀಗಣೇಶ್, ಕೋಟ ಸಮುದಾಯ ಕೇಂದ್ರ ವೈದ್ಯಾಧಿಕಾರಿ ಡಾ.ಮಾಧವ ಪೈ, ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಮೂಡುಗಿಳಿಯಾರು ಸರ್ವಕ್ಷೇಮ ಯೋಗಬನದಲ್ಲಿ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಣಿಪಾಲದ ಎಂಸಿಒಡಿಎಸ್ ಮುಖ್ಯಸ್ಥೆ ಡಾ. ಯತಿಕಾ ನಾಯಕ್, ಎಚ್‌ಒಡಿ ದಂತ ವೈದ್ಯರಾದ ಡಾ. ಕಲ್ಯಾಣ ಚಕ್ರವತಿ ಭಾಗಿಯಾಗಿ ಸಮಾಲೋಚನೆ ನಡೆಸಿದರು. ಸರ್ವಕ್ಷೇಮ ಯೋಗಬನ ಸಹ ನಿರ್ದೇಶಕ, ಡಾ.ಶ್ರೀಗಣೇಶ್, ಕೋಟ ಸಮುದಾಯ ಕೇಂದ್ರ ವೈದ್ಯಾಧಿಕಾರಿ ಡಾ.ಮಾಧವ ಪೈ ಉಪಸ್ಥಿತರಿದ್ದರು.
Leave a Reply