
ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಳೆಗಾಲದಲ್ಲಿ ಹರಿಯಲ್ಪಡುವ ನೀರು ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯನ್ನು ತಲುಪುತ್ತಿದ್ದು ಈ ಹಿನ್ನಲ್ಲೆಯಲ್ಲಿ ನೀರು ಸರಾಗವಾಗಿ ಹರಿಯದೆ ಸಂಕಷ್ಟಕ್ಕಿಡು ಮಾಡಿದೆ ಎಂದು ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಜಿಲ್ಲಾಡಳಿಕ್ಕೆ ದೂರು ನೀಡಿದ ಹಿನ್ನಲ್ಲೆಯಲ್ಲಿ ಮಂಗಳವಾರ ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೋಟದಿಂದ ಕೋಟತಟ್ಟು ಭಾಗ ಸಂಪರ್ಕಿಸುವ ತೋಡು ಹೂಳು ತುಂಬಿರುವ ಹಿನ್ನಲ್ಲೆಯನ್ನು ಮನಗಂಡ ತಹಶಿಲ್ದಾರ್ ಸಂಬoಧಿಸಿದ ಸ್ಥಳೀಯಾಡಳಿತಕ್ಕೆ ಮಳೆಗಾಲದ ತಯಾರಿ ಕುರಿತು ಮಾಹಿತಿ ಪಡೆದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚಿಸಿದರು.
ಕೋಟತಟ್ಟು ನರೇಗಾ ಅನುಷ್ಠಾನಕ್ಕೆ ಪ್ರಶಂಸೆ
ತಹಶಿಲ್ದಾರ ಸ್ಥಳ ಪರಿಶೀಲಿಸಿ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ನರೇಗಾ ಯೋಜನೆಯಡಿ 40ಕ್ಕೂ ಅಧಿಕ ಮಹಿಳೆಯರಿಂದ ತೋಡು ಹೂಳು ತೆಗೆಯುವ ಕಾರ್ಯವೈಕರಿಯ ಹಾಗೂ ಕ್ರಮಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೆ ಈ ಭಾಗಗಳ ಕೃಷಿ ಭೂಮಿಗಳ ಹಾನಿಯ ಸ್ಥಿತಿಗತಿಯನ್ನು ಅವಲೋಕಿಸಿದರು.
ಇದೇ ವೇಳೆ ಕೋಟ ಹೋಬಳಿ ಕಂದಾಯ ಅಧಿಕಾರಿ ಮಂಜು ಬಿಲ್ಲವ,ಕೋಟ ಗ್ರಾಮಲೆಕ್ಕಿಗ ಚಲುಚರಾಜು, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಸದಸ್ಯರಾದ ವಿದ್ಯಾ ಸಾಲಿಯಾನ್, ಸಾಹಿರಾ,ರಾಬರ್ಟ್ ನಾಯ್ಕ್, ಗ್ರಾಮಸಹಾಯಕ ರಾಜು ಕುಂದರ್ ಮತ್ತಿತರರು ಇದ್ದರು.
ಇಲ್ಲಿನ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಮಳೆಗಾಲದಲ್ಲಿ ಹರಿಯಲ್ಪಡುವ ನೀರಿನ ಸಮಸ್ಯೆಯನ್ನು ಬ್ರಹ್ಮಾವರ ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ ಭೇಟಿ ನೀಡಿ ಪರಿಶೀಲಿಸಿದರು. ಕೋಟ ಹೋಬಳಿ ಕಂದಾಯ ಅಧಿಕಾರಿ ಮಂಜು ಬಿಲ್ಲವ, ಕೋಟ ಗ್ರಾಮಲೆಕ್ಕಿಗ ಚಲುಚರಾಜು,ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್,ಕೋಟ ಗ್ರಾಮಪಂಚಾಯತ್ ಸದಸ್ಯ ಭುಜಂಗ ಗುರಿಕಾರ ಇದ್ದರು.
Leave a Reply