
ಬೈಂದೂರು : ಜೆಪಿ ಜೋಲಾಲ್ ಸ್ಮಾರಕ ಅಕಾಡೆಮಿ ಆಫ್ ಮಾರ್ಷಿಯಲ್ ಆರ್ಟ್ಸ್, ಕೆಂಪು ಕೈ ಕರಾಟೆ ಇಂಟರ್ನ್ಯಾಷನಲ್ ಅಫಿಲಿಯೇಟ್ ಯೂನಿವರ್ಸಲ್ ಕರಾಟೆ ಯೂನಿಯನ್ ಜಪಾನ್, ಬೈಂದೂರು ಘಟಕ ಉದ್ಘಾಟನೆ ಮತ್ತು ಕರಾಟೆ ಪ್ರದರ್ಶನ ಬೈಂದೂರು ಅಂಬೇಡ್ಕರ್ ಭವನದಲ್ಲಿ ನಡೆಯಿತು
ಖ್ಯಾತ ಕರಾಟೆ ಪಟು,14 ನೇ ವಯಸ್ಸಿನಲ್ಲಿಯೇ ಶಿಕ್ಷಣದ ಜೊತೆ ಜೊತೆಗೆ ಕರಾಟೆಯಲ್ಲಿ “Black Belt” ಪಡೆದು ಅನೇಕ ಪ್ರಶಸ್ತಿಗಳನ್ನು ಪಡೆದು,ಕರಾವಳಿ ಕುಂದಾಪುರ ದಿಂದ ದೂರದ ಗೋವಾದವರೆಗು ನೂರಾರು ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಣವನ್ನು ನೀಡಿ ಹಲವಾರು ವಿದ್ಯಾರ್ಥಿಗಳಿಗೆ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆಯುವಲ್ಲಿ ಸಮರ್ಥ ಮಾರ್ಗದರ್ಶಕರಾಗಿದ್ದ ಸುಬ್ರಹ್ಮಣ್ಯ ಪೂಜಾರಿ ಯಡ್ತರೆ ಅವರ ಧಕ್ಷ ನಿರ್ಧೆಶನದಲ್ಲಿ ಪ್ರಾಚೀನ ಕಲೆ ಕರಾಟೆಯನ್ನು ಉಳಿಸಿ ಬೆಳೆಸಿ ಇಂದಿನ ಯುವ ಸಮುದಾಯಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಸುಧೀರ್ಘ 30 ವರ್ಷಗಳ ನಂತರ ಮತ್ತೊಮ್ಮೆ ಹೆಸರಾಂತ ಕರಾಟೆ ಪಟುಗಳಾದ ರೀತನನ್, ಸಜೀವನ್, ಸಜೀ ಕಾರೆಕ್ಕನ್ ಮುಂತಾದವರ ಮುಂದಾಳತ್ವದಲ್ಲಿ ಕರಾಟೆ ತರಗತಿ ಉದ್ಘಾಟನೆ ಮತ್ತು ಕರಾಟೆ ಪ್ರದರ್ಶನ ಕೊಲ್ಲೂರು ದೇವಳದ ತಂತ್ರಿಗಳಾದ ಡಾ ಕೆ ರಾಮಚಂದ್ರ ಅಡಿಗ ಅವರು ಉದ್ಘಾಟಿಸಿ, ಮಾತನಾಡಿ ಮಾತನಾಡಿ ಕರಾಟೆ ಕಲೆ ಆತ್ಮ ರಕ್ಷಣೆಗಿದ್ದು, ಇದನ್ನು ದುರುಪಯೋಗ ಮಾಡಿಕೊಳ್ಳಬಾರದು. ಕರಾಟೆ ತರಬೇತಿ ಪಡೆಯುವುದರಿಂದ ಆತ್ಮ ಬಲ ಮತ್ತು ಮಾನಸಿಕವಾಗಿ ಸದೃಢವಾಗಲು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಕರಾಟೆ ವೈಯಕ್ತಿಕ ಬೆಳವಣಿಗೆಯನ್ನು ಬೆಳೆಸುತ್ತದೆ. ಕಠಿಣ ತರಬೇತಿಯ ಮೂಲಕ, ವಿದ್ಯಾರ್ಥಿಗಳು ದೈಹಿಕ ಶಕ್ತಿ, ಚುರುಕುತನ ಮತ್ತು ಮಾನಸಿಕ ಗಮನವನ್ನು ಬೆಳೆಸಿಕೊಳ್ಳುತ್ತಾರೆ. ತರಗತಿಯು ಏಕತೆ, ಗೌರವ ಮತ್ತು ಬೆಂಬಲಿತ ವಾತಾವರಣವನ್ನು ಉತ್ತೇಜಿಸುತ್ತದೆ ಎಂದರು.
30 ವರ್ಷಗಳ ನಂತರ ಮತ್ತೊಮ್ಮೆ ಹೆಸರಾಂತ ಕರಾಟೆ ಪಟುಗಳಾದ ರೀತನನ್, ಸಜೀವನ್, ಸಜೀ ಕಾರೆಕ್ಕನ್ ಇವರನ್ನು ಕೆಂಪುಕೈ ಕರಾಟೆ ಇಂಟರ್ನ್ಯಾಷನಲ್ ಅಫಿಲಿಯೇಟ್ ಯೂನಿವರ್ಸಲ್ ಕರಾಟೆ ಯೂನಿಯನ್ ಜಪಾನ್ ಬೈಂದೂರು ಘಟಕ ವತಿಯಿಂದ ಸನ್ಮಾಸಿ, ಗೌರವಿಸಲಾಯಿತು.
ಬೈಂದೂರು ಮಾಜಿ ಶಾಸಕ ಕೆ ಗೋಪಾಲ ಪೂಜಾರಿ, ಬೈಂದೂರು ಪೊಲೀಸ್ ಠಾಣೆಯ ಉಪನಿರೀಕ್ಷಕ ತಿಮ್ಮೇಶ್ ಬಿ.ಎನ್., ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಬೈಂದೂರು ಬಿಜೆಪಿ ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ಉಪ್ಪುಂದ, ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಬೆಂಗಳೂರು ಆರ್.ಟಿ.ಐ. ಕಾರ್ಯಕರ್ತ ರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆಂಪುಕೈ ಕರಾಟೆ ಇಂಟರ್ನ್ಯಾಷನಲ್ ಅಫಿಲಿಯೇಟ್ ಯೂನಿವರ್ಸಲ್ ಕರಾಟೆ ಯೂನಿಯನ್ ಜಪಾನ್ ಬೈಂದೂರು ಘಟಕ ಸಂಚಾಲಕ ಸುಬ್ರಹ್ಮಣ್ಯ ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಪೂಜಾರಿ ಯೋಜನಾನಗರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಹೆಸರಾಂತ ಕರಾಟೆ ಪಟುಗಳಾದ ರೀತನನ್, ಸಜೀವನ್, ಸಜೀ ಕಾರೆಕ್ಕನ್ ಹಾಗೂ ಕರಾಟೆ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ ನಡೆಯಿತು.
Leave a Reply