
ಕೋಟ:ಇಲ್ಲಿನ ಕೋಟದ ನಿವಾಸಿ ಪ್ರಸಿದ್ಧ ಮದ್ದಳೆ ವಾದಕ ರಾಘು ಹೆಗಡೆ ಯು.ಕೆ.ಗೆ ಪ್ರವಾಸಕ್ಕೆ ತೆರಳಿದ್ದಾರೆ. ಹಿಮ್ಮೇಳದೊಂದಿಗೆ ಮಧುರ ಹೊಂದಾಣಿಕೆ, ಮುಮ್ಮೇಳದ ಕಲಾಭಿವ್ಯಕ್ತಿ ಚೈತನ್ಯಶೀಲವಾಗಿಸುವ ನುಡಿಸುವಿಕೆ, ಮದ್ದಳೆಗಾರಿಕೆಯಲ್ಲಿ ಶುದ್ಧ, ಹೃದ್ಯ, ನಿರೂಪಣೆ, ಪ್ರಬುದ್ಧ ಮದ್ದಳೆವಾದನ. ಪರಿಪೂರ್ಣವಾಗಿ ಸಭಾಲಕ್ಷಣ, ಒಡ್ಡೋಲಗ, ಯುದ್ಧಕುಣಿತ ಹೀಗೆ ನೀರಾಳವಾಗಿ ಬಾರಿಸುವ ಸಾಲಿಗೆ ಸೇರಿದವರು ರಾಘವೇಂದ್ರ ಹೆಗಡೆ ಯಲ್ಲಾಪುರ ತನ್ನದೆ ಆದ ಅಭಿಮಾನಿಗಳನ್ನು ಕ್ರೂಡಿಸಿಕೊಂಡಿದ್ದಾರೆ
ಕಳೆದ 9 ವರ್ಷದಿಂದ ಕೋಟದ ಅಮೃತೇಶ್ವರಿ ಮೇಳದಲ್ಲಿ ಪ್ರಧಾನ ಮದ್ದಳೆ ವಾದಕರಾಗಿ ತಿರುಗಾಟ ನಡೆಸುತ್ತಿದ್ದಾರೆ. ಈ ಹಿಂದೆ ಬೇಹರಿನಲ್ಲಿ ಕಾರ್ಯಕ್ರಮ ನೀಡಿದ ಇವರು ಇದೀಗ ಯು.ಕೆ.ಯಲ್ಲಿ (ಇಂಗ್ಲೆoಡಿನಲ್ಲಿ) ಮ್ಯಾಂಚೆಸ್ಟರ್, ಡರ್ಬಿ, ಸೋಲಿಹುಲ್, ಕಾರ್ಡಿಫ್ ಮತ್ತು ಬೆಸಿಲ್ವಿನ್ ನಲ್ಲಿ ಯು.ಕೆ. ಯ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಲಿಯ ಸಹಕಾರದಲ್ಲಿ ಯಕ್ಷಗಾನ ಕಾರ್ಯಕ್ರಮಕ್ಕೆ ತೆರಳಿದ್ದಾರೆ.
Leave a Reply