
ಕೋಟ : ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಬ್ರಹ್ಮಾವರ ಕ್ಷೇತ್ರ ಸಮಿತಿಯ ಮಹಾಸಭೆ ಇತ್ತೀಚಿಗೆ ಚಾಂತಾರು ಪಂಚಾಯತ್ ಸಭಾಂಗಣದಲ್ಲಿ ಜರುಗಿತು .
ವಿಶೇಷ ಆಹ್ವಾನಿತರಾಗಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್, ಜಿಲ್ಲಾಧ್ಯಕ್ಷರಾದ ಗುರುರಾಜ್ ಶೆಟ್ಟಿ, ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಸುರೇಶ್ ಪಾಲನ್ ಕೋಶಾಧಿಕಾರಿ ಬಾಲಕೃಷ್ಣ ನಾಯಕ್ ಉಪಸ್ಥಿತರಿದ್ದರು.
ಆರು ವಲಯದ ಪದಾಧಿಕಾರಿಗಳ ಹಾಗೂ ಜಿಲ್ಲಾ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಮುಂದಿನ ಅವಧಿಗೆ ಬ್ರಹ್ಮಾವರ ವಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಗಣೇಶ್ ಟೈಲರ್ ಕೋಟ ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್ ಟೈಲರ್ ಕೋಟ ಕೋಶಾಧಿಕಾರಿಯಾಗಿ ವೀಣಾಶ್ರೀ ಪೇತ್ರಿ ಇವರನ್ನು ಮುಂದಿನ ಅವಧಿಗೆ ಆಯ್ಕೆ ಮಾಡಿ ಅಧಿಕಾರವನ್ನು ಹತ್ತಾಂತರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಅಧ್ಯಕ್ಷ ನವೀನ್.ಬಿ.ರಾವ್ ವಹಿಸಿದ್ದರು.ವೀಣಾಶ್ರೀ ಅವರು ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಕೃಷ್ಣ ದೇವಾಡಿಗ ಸ್ವಾಗತಿಸಿ, ಧನ್ಯವಾದ ಸಮರ್ಪಣೆ ಮಾಡಿದರು.
Leave a Reply