Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಿಕೋಪಕರಣ ವಿತರಣೆ

ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ, ಇಲ್ಲಿ ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘ ಹಂದಟ್ಟು, ಇವರು ಕೊಡಮಾಡಿದ 2025 -26ರ ಕಲಿಕೋಪಕರಣ ಇತ್ತೀಚಿಗೆ ಶಾಲೆಯಲ್ಲಿ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಕಮಲಾ ಮಯ್ಯ ಇವರು ಎಲ್ಲಾ ವಿದ್ಯಾರ್ಥಿಗಳಿಗೆ  ನೀಡಿರುವ ಐಡಿ ಕಾರ್ಡ್, ಹೊಸದಾಗಿ ಸೇರಿರುವ ವಿದ್ಯಾರ್ಥಿಗಳಿಗೆ ವಕೀಲರಾದ ಮಹೇಶ್ ಹಂದಟ್ಟು ನೀಡಿರುವ ಬ್ಯಾಗ್, ಒಂದನೇ ತರಗತಿ ವಿದ್ಯಾರ್ಥಿಗಳಿಗೆ ಉಪೇಂದ್ರ ಸೋಮಯಾಜಿ  ಚಿತ್ರಪಾಡಿ ಇವರು ನೀಡಿರುವ ಒಂದು ಸಾವಿರ ಮೊತ್ತದ  ನಿರಖು ಠೇವಣಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಮಧೇನು ವಿವಿಧೋದ್ದೇಶ   ಸಹಕಾರಿ ಸಂಘ  ಹಂದಟ್ಟು ಕೋಟ ಸಂಸ್ಥೆಯ ಅಧ್ಯಕ್ಷೆ ಶಾಂತ ಭಟ್ ಪಾಂಡೇಶ್ವರ ,ಸಂಸ್ಥೆಯ ಕಾನೂನು ಸಲಹೆಗಾರ ಮಂಜುನಾಥ್ ಎಸ್ ಕೆ, ಮುಖ್ಯ ಕಾರ್ಯನಿರ್ವಣಾಧಿಕಾರಿ ಸತೀಶ್ ಕೆ ನಾಯಕ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜು, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸವಿತಾ, ವಾಹನ ಸಮಿತಿಯ ಅಧ್ಯಕ್ಷ ಉಪೇಂದ್ರ ಸೋಮಯಾ.ಜಿ  ಚಿತ್ರಪಾಡಿ, ಎಸ್‌ಡಿಎಂಸಿ ಅಧ್ಯಕ್ಷೆ ಮಹಾಲಕ್ಶ್ಮೀ ಸೋಮಯಾಜಿ, ಕಮಲಾಮಯ್ಯ,  ಶಿಕ್ಷಕ ವೃಂದ ಪೋಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಅನುಜ್ಞಾ  ಕಾರ್ಯಕ್ರಮವನ್ನು ನಿರ್ವಹಿಸಿದರೆ, ಉನ್ನತಿ.ವಿ.ಹಂದಟ್ಟು ಸ್ವಾಗತಿಸಿದರು.ಸಾನ್ವಿ ಧನ್ಯವಾದಗೈದರು.ಶಾಲಾ ಮುಖ್ಯ ಶಿಕ್ಷಕಿ ಪುಷ್ಭಾವತಿ ಹೊಳ್ಳ ಕಾರ್ಯಕ್ರಮ ಸಂಯೋಜಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ, ಇಲ್ಲಿ ಕಾಮಧೇನು ವಿವಿಧೋದ್ದೇಶ ಸಹಕಾರಿ ಸಂಘ ಹಂದಟ್ಟು, ಇವರು ಕೊಡಮಾಡಿದ 2025 -26ರ ಕಲಿಕೋಪಕರಣ ಇತ್ತೀಚಿಗೆ ಶಾಲೆಯಲ್ಲಿ ವಿತರಿಸಲಾಯಿತು. ಕಾಮಧೇನು ವಿವಿಧೋದ್ದೇಶ   ಸಹಕಾರಿ ಸಂಘ  ಹಂದಟ್ಟು ಕೋಟ ಸಂಸ್ಥೆಯ ಅಧ್ಯಕ್ಷೆ ಶಾಂತ ಭಟ್ ಪಾಂಡೇಶ್ವರ ,ಸಂಸ್ಥೆಯ ಕಾನೂನು ಸಲಹೆಗಾರ ಮಂಜುನಾಥ್ ಎಸ್ ಕೆ, ಮುಖ್ಯ ಕಾರ್ಯನಿರ್ವಣಾಧಿಕಾರಿ ಸತೀಶ್ ಕೆ ನಾಯಕ್ ಇದ್ದರು

Leave a Reply

Your email address will not be published. Required fields are marked *