Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಭಟ್ಕಳ ಸರ್ಕಾರಿ ತಾಲೂಕ ಆಸ್ಪತ್ರೆಯ ಬಡವರ ಆಶಾಕಿರಣ ಜನಪ್ರಿಯ ವೈದ್ಯರಾದ ಡಾ.ಲಕ್ಷ್ಮೀಶ್ ನಾಯ್ಕ ಅವರನ್ನು ವರ್ಗಾವಣೆ ಮಾಡದಂತೆ ಆಗ್ರಹಿಸಿ ಕರ್ನಾಟಕ ರಣಧೀರರ ವೇಧಿಕೆಯಿಂದ ಆರೋಗ್ಯ ಸಚಿವರಿಗೆ ಮನವಿ

ಭಟ್ಕಳ-ಭಟ್ಕಳ ಸರ್ಕಾರಿ ತಾಲೂಕ ಆಸ್ಪತ್ರೆಯ ಬಡವರ ಆಶಾಕಿರಣ ಜನಪ್ರಿಯ ವೈದ್ಯರಾದ ಡಾ.ಲಕ್ಷ್ಮೀಶ್ ನಾಯ್ಕ ಇವರು ಹಲವಾರು ವರ್ಷಗಳಿಂದ ಬಡವರ ಸೇವೆ ಸಲ್ಲಿಸುತ್ತಿದ್ದು, ಇವರು ತಾಲೂಕಿನಲ್ಲಿ ವಿಷಕಾರಿ ಹಾವು ಕಡಿತಕ್ಕೆ ಒಳಗಾದ ರೋಗಿಗಳ ಜೀವ ಉಳಿಸಿದ ಜೀವ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅಲ್ಲದೇ ದಿನದ 24 ಗಂಟೆಗಳ ತನಕ ರೋಗಿಗಳು ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆ ಬಂದರೆ ಅವರನ್ನು ಪರೀಕ್ಷಿಸಿ ಅವರಿಗೆ ಔಷದೋಪಚಾರ ನೀಡಿ ಅವರನ್ನು ಬೇರೆ ಖಾಸಗಿ ಆಸ್ಪತ್ರೆ ಹೋಗದಂತೆ ಮತ್ತು ಬಡವರಿಗೆ ಆರ್ಥಿಕವಾಗಿ ತೊಂದೆಯಾಗದಂತೆ ನೋಡಿಕೊಳ್ಳುತ್ತಾರೆ. ಇಂತಹ ಬಡವರ ಬಂಧು, ಹಾಗೂ ಬಡವರ ಜೀವದಾನ ನೀಡುತ್ತಿರುವ ವೈದ್ಯ ಡಾ.ಲಕ್ಷ್ಮೀಶ್ ನಾಯ್ಕ ಅವರ ವರ್ಗಾವಣೆಯನ್ನು ವಿರೋಧಿಸಿ ಕರ್ನಾಟಕ ರಣಧೀರರ ವೇಧಿಕೆ ಭಟ್ಕಳ ತಾಲೂಕ ಘಟಕ ವತಿಯಿಂದ ತಾಲೂಕಾ ಆಡಳಿತ ವೈದ್ಯಾಧಿಕಾರಿಗಳ ಮೂಲಕ  ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ, ಅವರ ವರ್ಗಾವಣೆಯನ್ನು ಮಾಡಬಾರದೆಂದು ನಮ್ಮ ವೇದಿಕೆಯ ಮೂಲಕ ಆಗ್ರಹಿಸುತ್ತೇವೆ.

Leave a Reply

Your email address will not be published. Required fields are marked *